- Advertisement -
![]()
- Advertisement -
ಉಡುಪಿ;ಕೆಲಸಕ್ಕೂ ಹೋಗದೆ ,ಮನೆಗೂ ಬಾರದೇ ಯುವಕ ನಾಪತ್ತೆಯಾಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಒಡಿಸ್ಸಾ ನಿವಾಸಿ ಬಿಸು ಬೆಹೆರಾ(35) ನಾಪತ್ತೆಯಾದ ಯುವಕ.
ಶಿವರಾಮ್ ಕೊಟ್ಯಾನ್ ಅವರ ಮಾಲಿಕತ್ವದ ಮಲ್ಪೆಯಲ್ಲಿರುವ ಈಶದುರ್ಗಾ ಎಂಬ ಹೆಸರಿನ ಮೀನುಗಾರಿಕಾ ಪರ್ಸಿನ್ ಬೋಟ್ನಲ್ಲಿ ಕೆಲಸ ಮಾಡಿಕೊಂಡಿದ್ದ ಒಡಿಸ್ಸಾ ರಾಜ್ಯದ ಪುರಿ ಜಿಲ್ಲೆಯ ನಿವಾಸಿ ಬಿಸು ಬೆಹೆರಾ ಕೆಲಸ ಮಾಡುತ್ತಿದ್ದರು. ಇವರು ದಿನಾಂಕ 05/12/2025 ರಿಂದ ಬೋಟ್ ಗೆ ಕೆಲಸಕ್ಕೆ ಹೋಗದೇ ಮಲ್ಪೆ ಹನುಮಾನ್ ನಗರದಲ್ಲಿ ವಾಸ್ತವ್ಯದ ಮನೆಯಲ್ಲಿ ಇದ್ದವರು.ದಿನಾಂಕ 08/12/2025 ರಂದು ಸಂಜೆ 5:00 ಗಂಟೆಯ ನಂತರ ಸದ್ರಿ ಮನೆಯಿಂದ ಬಿಸು ಬೆಹೆರಾ ತನ್ನ ಬಟ್ಟೆ ಬರೆ ಹಾಗೂ ಬ್ಯಾಗ್ ಸಮೇತ ಎಲ್ಲಿಗೊ ಹೋದವರು ಈವರೆಗೂ ವಾಪಾಸು ಬಾರದೇ ಇದ್ದು,ಆತನ ಸ್ವಂತ ಊರಿಗೂ ಹೋಗದೆ ಕಾಣೆಯಾಗಿರುತ್ತಾನೆ.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


