Tuesday, June 9, 2026
Homeಕರಾವಳಿಮಂಗಳೂರುಬಂಟ್ವಾಳ:  ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ವಶಕ್ಕೆ : 810 ಗ್ರಾಂ ಗಾಂಜಾ ಸ್ವಾಧೀನ

ಬಂಟ್ವಾಳ:  ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ವಶಕ್ಕೆ : 810 ಗ್ರಾಂ ಗಾಂಜಾ ಸ್ವಾಧೀನ

- Advertisement -
- Advertisement -

ಬಂಟ್ವಾಳ:  ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ವಶಕ್ಕೆ ಪಡೆದು ಆರೋಪಿಗಳಿಂದ 810 ಗ್ರಾಂ ಗಾಂಜಾ ಸ್ವಾಧೀನ ಪಡೆಸಿಕೊಂಡ ಘಟನೆ ಬಂಟ್ವಾಳ, ತುಂಬೆ ಗ್ರಾಮದ ಹನುಮನಗರ ಎಂಬಲ್ಲಿ ನಡೆದಿದೆ. ಬಂಟ್ವಾಳ ತುಂಬೆ ನಿವಾಸಿ ಸಮೀರ್ (31) & ಮತ್ತೋರ್ವ ಬಂಟ್ವಾಳ ಗೂಡಿನ ಬಳಿ ನಿವಾಸಿ ಮೊಹಮ್ಮದ್ ಅಸೀಫ್ (35) ಬಂಧಿತರು.

ಪ್ರಕರಣದ ವಿವರದಿನಾಂಕ: 13.12.2025 ರಂದು ಸಂಜೆ, ರಾಷ್ಟ್ರೀಯ ಹೆದ್ದಾರಿ ಬಳಿ ಯಾರೋ ವ್ಯಕ್ತಿಗಳು ಅಕ್ರಮವಾಗಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಲು ವಶದಲ್ಲಿಟ್ಟುಕೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ,  ಮಂಜುನಾಥ ಟಿ, ಪೊಲೀಸ್ ಉಪ  ನಿರೀಕ್ಷಕರು (ಕಾ&ಸು), ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ರವರು, ಸಿಬ್ಬಂದಿಯೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ರಾಷ್ಟ್ರೀಯ ಹೆದ್ದಾರಿಯ ಪಕ್ಕ ನಿರ್ಜನ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು KA-19-MN-3664 ನೇ ನೊಂದಣಿ ಸಂಖ್ಯೆಯ ಕಾರು ಮತ್ತು KA-19-AE-0166 ನೇ ನೊಂದಣಿ ಸಂಖ್ಯೆಯ ಆಟೋ ರಿಕ್ಷಾದ ಬಳಿ ಇಬ್ಬರು ಅನುಮಾನಾಸ್ಪದವಾಗಿ ನಿಂತುಕೊಂಡಿದ್ದು, ಅವರುಗಳನ್ನು ಹಿಡಿದು ವಿಚಾರಿಸಿದಾಗ  ತಾವುಗಳು ಅಧಿಕ ಹಣಗಳಿಸುವ ಉದ್ದೇಶದಿಂದ ನಿಷೇಧಿತ ಮಾದಕವಸ್ತುವಾದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ತಪಾಸಣೆ ನಡೆಸಿದಾಗ ಕಾರಿನಲ್ಲಿ 450 ಗ್ರಾಂ. ಗಾಂಜಾ ಹಾಗೂ ರಿಕ್ಷಾದಲ್ಲಿ 360 ಗ್ರಾಂ ಗಾಂಜಾ ಪತ್ತೆಯಾಗಿರುತ್ತದೆ.

 ಮುಂದಿನ ಕಾನೂನು ಕ್ರಮಕ್ಕಾಗಿ ವಾಹನಗಳನ್ನು ಹಾಗೂ 810 ಗ್ರಾಂ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸ್ವಾಧೀನಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ ಕ್ರ : 183/2025  ಕಲಂ: 8(C), 20(B) ii (a) NDPS Act ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!