Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವ ಬೆದರಿಕೆ ಆರೋಪ; ಪತ್ರಕರ್ತ ಕೆ.ಎನ್‌ ಗೌಡರಿಂದ...

ಬೆಳ್ತಂಗಡಿ : ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವ ಬೆದರಿಕೆ ಆರೋಪ; ಪತ್ರಕರ್ತ ಕೆ.ಎನ್‌ ಗೌಡರಿಂದ ಠಾಣೆಗೆ ದೂರು

- Advertisement -
- Advertisement -

ಬೆಳ್ತಂಗಡಿ: ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ. ಅವರು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ, ಕಳಿಯ ಗ್ರಾಮದ ‘ದೇವಿ ಕೃಪಾ’ ಪೆಲತ್ತಳಿಕೆ ನಿವಾಸಿ, ಉದಯವಾಣಿ ವರದಿಗಾರ ಕೆ.ಎನ್. ಗೌಡ ಅವರು ಡಿ.10ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಡಿ.3ರಂದು ನಾಳ ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ 2027ನೇ ವರ್ಷದಲ್ಲಿ ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಮತ್ತು ಭಕ್ತರ ಸಭೆಯಲ್ಲಿ ಊರಿನ ಭಕ್ತನಾಗಿ ಹಾಗೂ ಪತ್ರಿಕೆ ವರದಿಗಾರನಾಗಿ ಭಾಗವಹಿಸಿರುತ್ತೇನೆ. ಅದರಂತೆಯೇ ಅ ದಿನ ಸಭೆಯಲ್ಲಿ ನಡೆದಿರುವ ವಿಷಯವನ್ನು ಅಧರಿಸಿ ನೈಜ ವರದಿಯನ್ನು ಕಳುಹಿಸಿ ಕೊಟ್ಟಿದ್ದು, ಅದು ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಪತ್ರಿಕೆಯಲ್ಲಿ ಬಂದ ಬಳಿಕ ಡಿ.9ರಂದು ಶ್ರೀ ಕ್ಷೇತ್ರದ ವಾಟ್ಸಾಫ್ ಗ್ರೂಪ್‌ನಿಂದ ನನ್ನ ಮೊಬೈಲ್ ಸಂಖ್ಯೆಯನ್ನು ರಿಮೂವ್ ಮಾಡಿದ್ದನ್ನು ವಿಚಾರಿಸಿದಾಗ ಮೊಬೈಲ್ ಫೋನ್ ಮೂಲಕ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿ, ವಾಯ್ಸ್ ರೆಕಾರ್ಡ್ ಕಳುಹಿಸಿ, ನನ್ನ ಪತ್ನಿ, ಮಗಳ ವಿಷಯ ಪ್ರಸ್ತಾಪಿಸಿ ಜೀವ ಬೆದರಿಕೆ ಹಾಕಿರುವುದಾಗಿ ಕೆ.ಎನ್ ಗೌಡ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ಹಿಂಬರಹ ನೀಡಿದ್ದು ಅದರಂತೆ ಘಟನೆಗೆ ಸಂಬಂಧಿಸಿದಂತೆ ದಾಖಲೆಗಳ ಮೂಲಕ ಕಾನೂನು ರೀತಿಯಲ್ಲಿ ಹೋರಾಟಕ್ಕೆ ವರದಿಗಾರ ಕೆ.ಎನ್ ಗೌಡ ಮುಂದಾಗಿದ್ದಾರೆ.

- Advertisement -

Latest News

error: Content is protected !!