Friday, June 26, 2026
Homeಕರಾವಳಿಮಂಗಳೂರುಮಂಗಳೂರು: ದಕ್ಷಿಣ ಕನ್ನಡದ ಒಂದೇ ಶಾಲೆಯಲ್ಲಿ ಒಟ್ಟು 17 ಮಕ್ಕಳಲ್ಲಿ ಚಿಕನ್ ಪಾಕ್ಸ್ ವೈರಸ್ ಪತ್ತೆ;...

ಮಂಗಳೂರು: ದಕ್ಷಿಣ ಕನ್ನಡದ ಒಂದೇ ಶಾಲೆಯಲ್ಲಿ ಒಟ್ಟು 17 ಮಕ್ಕಳಲ್ಲಿ ಚಿಕನ್ ಪಾಕ್ಸ್ ವೈರಸ್ ಪತ್ತೆ; ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್.ತಿಮ್ಮಯ್ಯ ಸೂಚನೆ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡದ ಒಂದೇ ಶಾಲೆಯಲ್ಲಿ ಒಟ್ಟು 17 ಮಕ್ಕಳಲ್ಲಿ ಚಿಕನ್ ಪಾಕ್ಸ್ ವೈರಸ್ ಪತ್ತೆಯಾಗಿದ್ದು  ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್.ತಿಮ್ಮಯ್ಯ ಸೂಚನೆ ನೀಡಿದ್ದಾರೆ.

ಚಿಕನ್ ಪಾಕ್ಸ್ ಮಕ್ಕಳಲ್ಲಿ, ಯಾವುದೇ ತೊಂದರೆ ಇಲ್ಲದೇ ಸಂಪೂರ್ಣವಾಗಿ ಗುಣವಾಗುತ್ತದೆ. ಒಮ್ಮೆ ಚಿಕನ್ ಪಾಕ್ಸ್‌ನಿಂದ ಬಳಲಿದ ವ್ಯಕ್ತಿ ಜೀವಿತಾವಧಿಯವರೆಗೂ ಅದರ ವಿರುದ್ಧ ರೋಗ ನಿರೋಧಕ ಶಕ್ತಿ ಹೊಂದುತ್ತಾನೆ. ಇದರಿಂದ ಒಮ್ಮೆ ಚಿಕನ್ ಪಾಕ್ಸ್ ಬಂದವರಿಗೆ ಜೀವಿತಾವಧಿಯಲ್ಲಿ ಮತ್ತೊಮ್ಮೆ ಯಾವತ್ತೂ ಬರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್.ತಿಮ್ಮಯ್ಯ ಹೇಳಿದ್ದಾರೆ.

ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಭೀತಿ ಬೇಡ ಮುನ್ನೆಚ್ಚರಿಕೆ ಇರಲಿ. ಇದೊಂದು ಸಾಂಕ್ರಾಮಿಕ ಖಾಯಿಲೆಯಾದ್ದರಿಂದ ಯಾವುದೇ ಕಾರಣಕ್ಕೆ ಒಬ್ಬನಿಂದ ಮತ್ತೊಬ್ಬನಿಗೆ ಹರಡದಂತೆ ಜಾಗ್ರತೆ ವಹಿಸುವುದು ಅಗತ್ಯ. ಒಂದು ಬಾರಿ ಚಿಕನ್ ಪಾಕ್ಸ್ ಕಾಣಿಸಿಕೊಂಡರೆ ಗುಣಮುಖರಾಗಲು ಸುಮಾರು 2 ವಾರಗಳ ಸಮಯ ಬೇಕಾಗುತ್ತದೆ ಎಂದಿದ್ದಾರೆ.

- Advertisement -

Latest News

error: Content is protected !!