Saturday, June 13, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಚಾರ್ಮಾಡಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಬಾಲಕ ಮೃತ್ಯು

ಬೆಳ್ತಂಗಡಿ : ಚಾರ್ಮಾಡಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಬಾಲಕ ಮೃತ್ಯು

- Advertisement -
- Advertisement -

ಬೆಳ್ತಂಗಡಿ : ಅಂಗಡಿಯಿಂದ ತಿಂಡಿ ತೆಗೆದುಕೊಂಡು ರಸ್ತೆ ದಾಟುತ್ತಿದ್ದಾಗ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಡಿ.3 ರಂದು ಚಾರ್ಮಾಡಿಯ ಬೀಟಿಗೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತದ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಎಂಬವರ ಪುತ್ರ (3) ಮಹಮ್ಮದ್ ಹಝೀರಿನ್ ಮೃತ ಕಂದಮ್ಮ.

ಬಾಲಕ ಮಹಮ್ಮದ್ ಹಝೀರಿನ್ ತಮ್ಮ ಚಾರ್ಮಾಡಿಯ ಬೀಟಿಗೆ ಮನೆಯ ಸಮೀಪ ರಸ್ತೆಯ ಆ ಕಡೆ ಇದ್ದ ಅಂಗಡಿಗೆ ತಿಂಡಿ ತರಲೆಂದು ಹೋಗಿ, ತಿಂಡಿ ತೆಗೆದುಕೊಂಡು ರಸ್ತೆ ದಾಟುತ್ತಿರುವ ಸಮಯ ಈ ಘಟನೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!