Saturday, June 6, 2026
Homeತಾಜಾ ಸುದ್ದಿನುಗ್ಗೇಕಾಯಿಗೆ ರಾಜ್ಯದಲ್ಲಿ ಬಂಪರ್‌ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ

ನುಗ್ಗೇಕಾಯಿಗೆ ರಾಜ್ಯದಲ್ಲಿ ಬಂಪರ್‌ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ

- Advertisement -
- Advertisement -

ನುಗ್ಗೇಕಾಯಿ ಬೆಲೆ ಮಟನ್‌ ದರದಷ್ಟೇ ಹೆಚ್ಚಾಗಿದ್ದು, ನುಗ್ಗೇಕಾಯಿ ದರ ಕೆಜಿಗೆ 600 ರಿಂದ 700ರೂ ಆಗಿದೆ. ಸದ್ಯಕ್ಕೆ ನುಗ್ಗೇಕಾಯಿ ಖರೀದಿ ಅಸಾಧ್ಯ ಎಂದು ಜನಸಾಮಾನ್ಯರು ಬೇಸರ ಹೊರಹಾಕಿದ್ದಾರೆ.

ಈ ಬಾರಿಯ ಹವಾಮಾನ ವೈಪರೀತ್ಯದಿಂದ ನುಗ್ಗೇಕಾಯಿ ಬೆಳೆ ಬಂದಿಲ್ಲ. ಆದ್ದರಿಂದ ನುಗ್ಗೇಕಾಯಿ ಹೆಚ್ಚು ಸರಬರಾಜಾಗುತ್ತಿಲ್ಲ. ಬೆಲೆ ಕೂಡ ಗಗನಕ್ಕೇರಿದೆ. ಮಾರುಕಟ್ಟೆಗಳಲ್ಲಿ ಸೊಪ್ಪು, ತರಕಾರಿಗಳ ಬೆಲೆ ತೀವ್ರ ಏರಿಕೆ ಆಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಹಿಂಗಾರು ಮಳೆ ವಿಳಂಬದಿಂದ ಕಡಿಮೆ ಇಳುವರಿ ಹಾಗೂ ಬೆಳೆಗಳಿಗೆ ರೋಗ ಇರುವ ಕಾರಣ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗದ ಕಾರಣ ಬೆಲೆ ಗಗನಕ್ಕೇರಿದೆ.

ಜೊತೆಗೆ ಹಸಿ ಬಟಾಣಿ ದರ ಕೂಡ ಭಾರೀ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

- Advertisement -

Latest News

error: Content is protected !!