Tuesday, June 9, 2026
Homeತಾಜಾ ಸುದ್ದಿನಂದಿನಿ ಮಳಿಗೆಗಳಲ್ಲಿ ಬೇರೆ ಬ್ರ್ಯಾಂಡ್ ಉತ್ಪನ್ನಗಳ ಮಾರಾಟ; ಕಡಿವಾಣ ಹಾಕಲು ಮುಂದಾದ ಕೆಎಂಎಫ್

ನಂದಿನಿ ಮಳಿಗೆಗಳಲ್ಲಿ ಬೇರೆ ಬ್ರ್ಯಾಂಡ್ ಉತ್ಪನ್ನಗಳ ಮಾರಾಟ; ಕಡಿವಾಣ ಹಾಕಲು ಮುಂದಾದ ಕೆಎಂಎಫ್

- Advertisement -
- Advertisement -

ನಂದಿನಿ ಬೂತ್​ಗಳಲ್ಲಿ ನಂದಿನಿ ಉತ್ಪನ್ನಗಳೊಡನೆ ಬೇರೆ ಬ್ರ್ಯಾಂಡ್​ಗಳ ಉತ್ಪನ್ನಗಳನ್ನು ಕೂಡ ಮಾರಾಟ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೆಎಂಎಫ್ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಬೂತ್ ​ಗಳಲ್ಲಿ ನಂದಿನಿ ಹೊರತುಪಡಿಸಿ ಬೇರೆ ಪ್ರಾಡಕ್ಟ್ ಮಾರಾಟ ಮಾಡುತ್ತಿದ್ದ ಮಾಲೀಕರಿಗೆ ಕೆಎಂಎಫ್ ನೋಟಿಸ್ ನೀಡಲು ಹೊರಟಿದ್ದು, ಈ ಮೂಲಕ ಬೇರೆ ಬ್ರಾಂಡ್ ಮಾರುವ ಮಾಲೀಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಅಷ್ಟೇಅಲ್ಲದೆ ಒಂದು ವೇಳೆ ಆದೇಶ ಮೀರಿ ಇತರ ಉತ್ಪನ್ನಗಳ ಮಾರಾಟ ಮಾಡುವುದರ ಕುರಿತು ತಿಳಿದುಬಂದಲ್ಲಿ ಬೂತ್​ ಗಳ ಮಾಲೀಕರ ಲೈಸೆನ್ಸ್ ರದ್ದು ಮಾಡುವುದಾಗಿ ಕೆಎಂಎಫ್ ಎಂಡಿ ಶಿವಸ್ವಾಮಿ ಹೇಳಿದ್ದಾರೆ.

- Advertisement -

Latest News

error: Content is protected !!