Wednesday, June 3, 2026
Homeತಾಜಾ ಸುದ್ದಿದೈವಕ್ಕೆ ಅವಮಾನ ಎಸಗಿದ ಪ್ರಕರಣ: ಕೊನೆಗೂ ಕ್ಷಮೆಯಾಚಿಸಿದ ನಟ ರಣ್ವೀರ್ ಸಿಂಗ್

ದೈವಕ್ಕೆ ಅವಮಾನ ಎಸಗಿದ ಪ್ರಕರಣ: ಕೊನೆಗೂ ಕ್ಷಮೆಯಾಚಿಸಿದ ನಟ ರಣ್ವೀರ್ ಸಿಂಗ್

- Advertisement -
- Advertisement -

ಮುಂಬೈ : ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2025 ರ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣ್ವೀರ್ ಸಿಂಗ್ ದೈವವನ್ನು ಅವಮಾನಿಸಿದಕ್ಕೆ  ಕುರಿತಂತೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ರಣವೀರ್ ಸಿಂಗ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.


ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿರುವ ಅವರು “ಚಿತ್ರದಲ್ಲಿ ರಿಷಭ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ನಟನಿಂದ ನಟನಿಗೆ, ಆ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸಲು ಎಷ್ಟು ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ, ಅದಕ್ಕಾಗಿ ಅವರು ನನ್ನ ಅತ್ಯಂತ ಮೆಚ್ಚುಗೆಯನ್ನು ಹೊಂದಿದ್ದಾರೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದರು.

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭ ನಟ ರಣವಿರ್ ಸಿಂಗ್ ವೇದಿಕೆಯಲ್ಲಿ ಕಾಂತಾರ ಚಿತ್ರದಲ್ಲಿ ಬರುವ ಚಾಮುಂಡಿ ದೈವದ ಅನುಕರಣೆ ಮಾಡಿದ್ದರು, ಅಲ್ಲದೆ ದೈವವನ್ನು ದೆವ್ವ ಎಂದು ಎಂದು ಹೇಳಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ನಟ ರಣವೀರ್ ಸಿಂಗ್ ಕ್ಷಮೆ ಕೇಳುವ ಮೂಲಕ ವಿವಾದವನ್ನು ತಿಳಿಗೊಳಿಸಿದ್ದಾರೆ.

- Advertisement -

Latest News

error: Content is protected !!