Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಎಸ್.ಐ.ಟಿ ತನಿಖೆ ಮುಂದುವರಿಯಲಿ:ಅರ್ಜಿದಾರರಿಗೆ ಕಿರುಕುಳ ಬೇಡ ಹೈಕೋರ್ಟ್

ಬೆಳ್ತಂಗಡಿ : ಎಸ್.ಐ.ಟಿ ತನಿಖೆ ಮುಂದುವರಿಯಲಿ:ಅರ್ಜಿದಾರರಿಗೆ ಕಿರುಕುಳ ಬೇಡ ಹೈಕೋರ್ಟ್

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ 39/2025 ಪ್ರಕರಣದ ರದ್ದು ಕೋರಿದ ಮತ್ತು ಪ್ರಕರಣಕ್ಕೆ ತಡೆ ಕೋರಿ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ವಿಠಲ್ ಗೌಡ, ಜಯಂತ್.ಟಿ ಸೇರಿ ಅರ್ಜಿ ಸಲ್ಲಸಿದ್ದ ಪ್ರಕರಣ ಕಳೆದ ಭಾರಿಯ ವಿಚಾರಣೆಯಲ್ಲಿ ಎಸ್.ಐ.ಟಿ ವಿಚಾರಣೆಗೆ ತಡೆಯಾಜ್ಞೆ ತೆರವು ಮಾಡಿ ವಿಚಾರಣೆ ಮುಂದೂಡಿತ್ತು.

ಈಗ ನಡೆಯುತ್ತಿರುವ ಎಸ್.ಐ.ಟಿ ತನಿಖೆ ಮುಂದುವರಿಯಲಿ ಅರ್ಜಿದಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ಕಿರುಕುಳ ನೀಡಬಾರದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು ಮತ್ತೆ ಮುಂದೂಡಿದೆ.

ನ28 ರಂದು ಎಸ್‌.ಐ.ಟಿ ತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿದ ಹೈಕೋರ್ಟ್ ದೂರುದಾರರ ಪರವಾದ ವಾದಗಳನ್ನು ಆಲಿಸಿದ ಬಳಿಕ ಎಸ್.ಐ.ಟಿ ತನಿಖೆ ಮುಂದುವರಿಯಲಿ ಎಂದು ನ್ಯಾಯಾಲಯ ಸೂಚಿಸಿದೆ.

ಈ ಹಿಂದೆ ನೀಡಿದ್ದ ಆದೇಶದಂತೆ ಅರ್ಜಿದಾರರಿಗೆ ಎಸ್.ಐ.ಟಿ ಯಾವುದೇ ಕಿರುಕುಳ ನೀಡಬಾರದು ಎಂದು ಸೂಚಿಸಿದೆ.
ಇದೀಗ ಎಸ್.ಐ.ಟಿ ತನಿಖೆಗೆ ಯಾವುದೇ ಅಡೆತಡೆಗಳು ಇಲ್ಲವಾಗಿದ್ದು ತನಿಖೆ ಮುಂದುವರಿಯಲಿದೆ.

ಈಗಾಗಲೆ ಎಸ್.ಐ.ಟಿ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ BNS 215 ಅಡಿಯಲ್ಲಿ ವರದಿಯೊಂದನ್ನು ಸಲ್ಲಿಸಿದ್ದು ನ್ಯಾಯಾಲಯದಲ್ಲಿ ತನಿಖೆಯೊಂದಿಗೆ ಮಹೇಶ್ ಶೆಟ್ಟಿ ಹಾಗೂ ಇತರರು ಸಹಕರಿಸುತ್ತಿಲ್ಲ ಎಂಬ ವಿಚಾರವನ್ನು ನ್ಯಾಯಾಧೀಶರ ಮುಂದೆ ಇಟ್ಟಿರುವುದಾಗಿ ತಿಳಿದು ಬಂದಿದ್ದು ನ್ಯಾಯಾಲಯದಿಂದ ಡಿ.2 ರಂದು ಸೂಕ್ತ ಅನುಮತಿಗಳನ್ನು ಪಡೆದುಕೊಂಡು ಮುಂದಿನ ತನಿಖೆಗೆ ಸಿದ್ದತೆ ನಡೆಸುತ್ತಿದೆ.

- Advertisement -

Latest News

error: Content is protected !!