Thursday, June 4, 2026
Homeತಾಜಾ ಸುದ್ದಿಇಡೀ ಮನೆ ತಣ್ಣಗಿದ್ದರೂ ಕಾದ ಹೆಂಚಿನಂತೆ ಬಿಸಿಯಾದ ಹಾಲ್; ದಾವಣಗೆರೆ ಜಿಲ್ಲೆಯಲ್ಲೊಂದು ಅಚ್ಚರಿ

ಇಡೀ ಮನೆ ತಣ್ಣಗಿದ್ದರೂ ಕಾದ ಹೆಂಚಿನಂತೆ ಬಿಸಿಯಾದ ಹಾಲ್; ದಾವಣಗೆರೆ ಜಿಲ್ಲೆಯಲ್ಲೊಂದು ಅಚ್ಚರಿ

- Advertisement -
- Advertisement -

ದಾವಣಗೆರೆ: ಮನೆಯ ಹಾಲ್ ಕಾದ ಹೆಂಚಿನಂತೆ ಬಿಸಿಯಾಗುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಜರುಗಿದೆ.ಹರಿಹರ ನಗರದ ರಾಜಾರಾಮ ಕಾಲೋನಿಯಲ್ಲಿರುವ ಶಿಕ್ಷಕ ಮಾರುತೇಶ್ ಎಂಬವರ ಮನೆಯಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.

ಮನೆಯ ಹಾಲ್ ನಲ್ಲಿ ಅಳವಡಿಸಿರುವ ಟೈಲ್ಸ್ ಬಿಸಿಯಾಗಿ ಕಾದ ಹಂಚಿನಂತಾಗಿದ್ದು,ಒದ್ದೆ ಬಟ್ಟೆಯಿಂದ ಒರೆಸಿದರೂ ಕೂಡಾ ಕಾವು ಹೆಚ್ಚಾಗುತ್ತಿದೆ ಎನ್ನಲಾಗಿದೆ. ಆದರೆ ಯಾವ ಕಾರಣಕ್ಕೆ ಟೈಲ್ಸ್ ಗಳು ಬಿಸಿಯಾಗುತ್ತಿವೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಶೌಚಾಲಯದ ಗುಂಡಿಯಿಂದ ಈ ರೀತಿ ಆಗಿರಬಹುದು ಎಂದು ಅಂದಾಜಿಸಲಾಗಿದ್ದರೂ ಶೌಚಾಲಯದ ಗುಂಡಿ ಸ್ವಚ್ಚಗೊಳಿಸಿದರೂ ಕೂಡಾ ಮನೆಯ ಹಾಲ್ ನಲ್ಲಿ ಬಿಸಿ ಕಡಿಮೆಯಾಗುತ್ತಿಲ್ಲ ಎಂದು ತಿಳಿದು ಬಂದಿದೆ.ಇಡೀ‌ ಮನೆ ತಣ್ಣಗಿದ್ದರೂ ಹಾಲ್‌ ನಲ್ಲಿ ಮಾತ್ರ ಬಿಸಿ ಹೆಚ್ಚಾಗಿರುವುದು ಶಿಕ್ಷಕ ಮಾರುತೇಶ್ ಕುಟುಂಬದ ಆತಂಕಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!