Saturday, June 6, 2026
Homeತಾಜಾ ಸುದ್ದಿನ.14 ರಂದು ಎಲ್ಲಾ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಪೋಷಕ -ಶಿಕ್ಷಕರ ಮಹಾಸಭೆ

ನ.14 ರಂದು ಎಲ್ಲಾ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಪೋಷಕ -ಶಿಕ್ಷಕರ ಮಹಾಸಭೆ

- Advertisement -
- Advertisement -

ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನ.14 ರಂದು ಪೋಷಕ -ಶಿಕ್ಷಕರ ಮಹಾಸಭೆ ನಡೆಸಲು ರಾಜ್ಯ ಸರ್ಕಾರ ಸೂಚಿಸಿದೆ.

ಈ ಸಭೆಯ ಮುಖ್ಯ ಉದ್ದೇಶ ಶಾಲಾ/ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವುದರ ಜೊತೆಗೆ ಸರ್ಕಾರಿ ಶಾಲೆ-ಕಾಲೇಜುಗಳಬಗ್ಗೆ ಪೋಷಕರಲ್ಲಿ ಭರವಸೆಯನ್ನು ಹೆಚ್ಚಿಸಲು ಈ ಮಹಾಸಭೆಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಕಲಿಕೆಯಲ್ಲಿ ಮತ್ತು ಇತರ ಸಹಪಠ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಅಭಿನಂದಿಸಬೇಕು ಎಂದು ಸರ್ಕಾರದಿಂದ ಸೂಚನೆ ಬಂದಿದೆ.

ಅಷ್ಟೇಅಲ್ಲದೆ ಮಹಾಸಭೆಯ ದಿನದಂದು ಶಾಲೆಗಳನ್ನು ಅಲಂಕರಿಸಿ ಹಬ್ಬದಂತೆ ಆಚರಿಸಬೇಕು ಎಂದು ಇಲಾಖೆ ಸೂಚಿಸಿದೆ.

- Advertisement -

Latest News

error: Content is protected !!