Thursday, June 4, 2026
Homeತಾಜಾ ಸುದ್ದಿ‘ಜೈಲರ್ 2’ ಚಿತ್ರದಲ್ಲಿ ನಟಿಸಲಿದ್ದಾರೆ ಮೇಘನಾ ರಾಜ್; 13 ವರ್ಷಗಳ ಬಳಿಕ ತಮಿಳಿಗೆ ವಾಪಸ್ಸಾದ ನಟಿ

‘ಜೈಲರ್ 2’ ಚಿತ್ರದಲ್ಲಿ ನಟಿಸಲಿದ್ದಾರೆ ಮೇಘನಾ ರಾಜ್; 13 ವರ್ಷಗಳ ಬಳಿಕ ತಮಿಳಿಗೆ ವಾಪಸ್ಸಾದ ನಟಿ

- Advertisement -
- Advertisement -

ರಜನಿಕಾಂತ್‍ ಅಭಿನಯದ ‘ಜೈಲರ್‍ 2’ ನಟಿ ಮೇಘನಾ ರಾಜ್ ಕೂಡ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.ಸುಮಾರು 15 ವರ್ಷಗಳ ನಂತರ ಅವರು ತಮಿಳಿನಲ್ಲಿ ನಟಿಸುತ್ತಿದ್ದಾರೆ.

15 ವರ್ಷಗಳ ಹಿಂದೆಯೇ ಅವರು ‘ಕಾದಲ್‍ ಸೊಲ್ಲ ವಂದೇನನ್‍’, ‘ಉಯರತಿರರು 420’ ಮತ್ತು ‘ನಂದ ನಂದಿತ’ ಚಿತ್ರಗಳಲ್ಲಿ ನಟಿಸಿದ್ದರು. 2012ರಲ್ಲಿ ಬಿಡುಗಡೆಯಾದ ‘ನಂದ ನಂದಿತ’ ನಂತರ ಅವರು ಯಾವುದೇ ತಮಿಳು ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ‘ಜೈಲರ್‍ 2’ ಚಿತ್ರದ ಮೂಲಕ ಅವರು ಕಾಲಿವುಡ್‍ಗೆ ವಾಪಸ್ಸಾಗಿದ್ದಾರೆ.

‘ಜೈಲರ್‍ 2’ ಚಿತ್ರವು 2026ರ ಜೂನ್‍.12ರಂದು ಬಿಡುಗಡೆಯಾಗುತ್ತಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್‍ ಜೊತೆಗೆ ಎಸ್.ಜೆ. ಸೂರ್ಯ, ರಮ್ಯಾ ಕೃಷ್ಣ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದು, ಕನ್ನಡದ ಶಿವರಾಜಕುಮಾರ್‍, ಹಿಂದಿಯ ಮಿಥುನ್‍ ಚಕ್ರವರ್ತಿ, ತೆಲುಗಿನ ನಂದಮೂರಿ ಬಾಲಕೃಷ್ಣ, ಮಲಯಾಳಂನ ಮೋಹನ್‍ ಲಾಲ್‍ ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಜೈಲರ್‍ 2’ ಚಿತ್ರವು 2023ರಲ್ಲಿ ಬಿಡುಗಡೆಯಾದ ‘ಜೈಲರ್‍’ ಚಿತ್ರದ ಮುಂದಿನ ಭಾಗವಾಗಿದ್ದು, ಈ ಚಿತ್ರಕ್ಕೆ ನೆಲ್ಸನ್‍ ದಿಲೀಪ್‍ ಕುಮಾರ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಸನ್‍ ಪಿಕ್ಚರ್ಸ್‌ನ ಕಲಾನಿಧಿ ಮಾರನ್‍ ನಿರ್ಮಾಣ ಮಾಡುತ್ತಿದ್ದಾರೆ. ಅನಿರುದ್ಧ್ ರವಿಚಂದರ್‍ ಸಂಗೀತ ಈ ಚಿತ್ರಕ್ಕಿದೆ.

- Advertisement -

Latest News

error: Content is protected !!