Thursday, June 4, 2026
Homeಕರಾವಳಿನೆಲ್ಲಿತೀರ್ಥ ದೇವಸ್ಥಾನದ ಪರಿಸರದಲ್ಲಿ ಕಪ್ಪುಚಿರತೆ ಸಂಚಾರ

ನೆಲ್ಲಿತೀರ್ಥ ದೇವಸ್ಥಾನದ ಪರಿಸರದಲ್ಲಿ ಕಪ್ಪುಚಿರತೆ ಸಂಚಾರ

- Advertisement -
- Advertisement -

ಬಜಪೆ ಸಮೀಪದ ನೆಲ್ಲಿತೀರ್ಥ ದೇವಸ್ಥಾನದ ಪರಿಸರದಲ್ಲಿ ಕಪ್ಪುಚಿರತೆ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ಈ ಘಟನೆಯು ಮನೆಯೊಂದರ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ನೆಲ್ಲಿತೀರ್ಥ ಬಳಿ ಜನವರಿಯಲ್ಲಿ ಒಂದು ಕಪ್ಪು ಚಿರತೆ ಕಂಡು ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಆಗಾಗ ಕಾಣ ಸಿಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ರಾಜೇಶ್‌ ಬಳಿಗಾರ್‌, ಕಪ್ಪು ಚಿರತೆ ಸಂಚಾರದ ಕುರಿತಂತೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಆ ಪ್ರದೇಶಲ್ಲಿ ಕಪ್ಪು ಚಿರತೆ ಸೇರಿದಂತೆ, ಸಾಮಾನ್ಯ ಚಿರತೆಯ ಸಂಚಾರ ಇದೆ. ಕಾಡು- ಗುಡ್ಡ ಭೌಗೋಳಿಕ ಪ್ರದೇಶವಾಗಿರುವುದರಿಂದ ಚಿರತೆಗಳು ವಾಸ ಮಾಡುತ್ತಿವೆ. ಸಾರ್ವಜನಿಕರು ರಾತ್ರಿ ವೇಳೆ ಹಾಗೂ ಹಗಲು ನಿರ್ಜನ ಪ್ರದೇಶದಲ್ಲಿ ಸಂಚರಿಸುವಾಗ ಎಚ್ಚರ ವಹಿಸಬೇಕು ಎಂದರು.

- Advertisement -

Latest News

error: Content is protected !!