ಬಿಗ್ಬಾಸ್ ಸೀಸನ್ 12ರಲ್ಲಿ ರಿಷಾ ಅವರು ರೊಚ್ಚಿಗೆದ್ದು ಗಿಲ್ಲಿ ಅವರಿಗೆ ಪೆಟ್ಟು ಕೊಟ್ಟಿದ್ದಾರೆ ಎನ್ನುವ ಪ್ರೋಮೊ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
ರಿಷಾ ಗೌಡ ಬಾತ್ರೂಂನಲ್ಲಿದ್ದಾಗ ಗಿಲ್ಲಿ ಬಕೆಟ್ ಕೇಳಿದ್ದಾರೆ. ಇದಕ್ಕೆ ರಿಷಾ ಪ್ರತಿಕ್ರಿಯೆ ನೀಡಲಿಲ್ಲ. ಆಗ ಗಿಲ್ಲಿ, ರಿಷಾ ಬಕೆಟ್ ಕೊಡೋದಿಲ್ಲ ಅಂತ ಹೇಳು, ನಾನು ಏನ್ ಮಾಡಬೇಕೋ ಮಾಡ್ತೀನಿ ಎಂದಿದ್ದಾರೆ. ಅಲ್ಲದೆ ರಿಷಾ ಗೌಡ ಬಟ್ಟೆಗಳನ್ನ ತಂದು ನೆಲದ ಮೇಲೆ ಇಟ್ಟಿದ್ದಾರೆ.
ಬಳಿಕ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಬಾತ್ರೂಂನಿಂದ ಹೊರಬಂದ ರಿಷಾ ತನ್ನ ಬಟ್ಟೆಗಳು ನೆಲದ ಮೇಲೆ ಇಟ್ಟಿರುವುದನ್ನ ನೋಡಿ ರೊಚ್ಚಿಗೆದ್ದಿದ್ದಾರೆ. ಕೋಪದಿಂದ ಗಿಲ್ಲಿ ಎಂದು ಜೋರಾಗಿ ಕಿರುಚಾಡಿದ್ದಾರೆ.
ಅಲ್ಲದೆ ರಿಷಾ ಕೂಡ ಗಿಲ್ಲಿ ಬಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಆಗ ಗಿಲ್ಲಿ ಮಾಡಿದ ಅಂತ ನೀನೂ ಹಾಗೆ ಮಾಡಬೇಡ ಎಂದು ಅಶ್ವಿನಿಗೌಡ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ರಿಷಾ, ಬಟ್ಟೆಗಳನ್ನ ಕಾಲಲ್ಲೇ ಒದ್ದು ಬಿಸಾಡಿದ್ದಾರೆ. ಅಲ್ಲಿಗೆ ಬಂದ ಗಿಲ್ಲಿ ಜೊತೆ ಕೈಕೈ ಮಿಲಾಯಿಸಿದ್ದಾರೆ.
ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ ಅವರು ಎಲಿಮಿನೇಟ್ ಆಗುತ್ತಾರೆಯೇ ಎಂದು ಇದೀಗ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಸಣ್ಣ ತಮಾಷೆಗೆ ಇಷ್ಟೆಲ್ಲ ರಂಪಾಟ ಮಾಡೋ ಅಗತ್ಯ ಇರಲಿಲ್ಲ ಅಂತ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು.
ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್ಕೇಸ್ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ. ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ. ಕಳೆದ ಸೀಸನ್ಗಳಲ್ಲಿ ಈ ರೀತಿ ಮಾಡಿದಾಗ ತಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಆದರೆ ತಕ್ಷಣಕ್ಕೆ ಬಿಗ್ ಬಾಸ್ ಈಗ ರಿಷಾ ಅವರ ಮೇಲೆ ಯಾವುದೇ ಆಕ್ಷನ್ ತೆಗೆದುಕೊಂಡಿಲ್ಲ. ಹೀಗಾಗಿ ವೀಕೆಂಡ್ನಲ್ಲಿ ಈ ಬಗ್ಗೆ ಚರ್ಚೆ ಆಗಿ ರಿಷಾ ಅವರು ಎಲಿಮಿನೇಟ್ ಆಗ್ತಾರಾ? ಎನ್ನುವ ಪ್ರಶ್ನೆ ವೀಕ್ಷಕರದ್ದು.
ಇನ್ನು ಗಿಲ್ಲಿ ಟಾಸ್ಕ್ ಆಡುವಾಗ ರಿಷ ಅವರ ಮುಖಕ್ಕೆ ಮಸಿ ಹಚ್ಚಿ, ನೀನು ನನ್ನ ಮುಖವಾಡ ಕಳುಚುತ್ತಿಯೋ ಇಲ್ಲವೋ ಗೊತ್ತಿಲ್ಲ ಆದರೆ ನಿನ್ನ ಮುಖವಾಡ ಮಾತ್ರ ಈಗಾಗಲೇ ಕಳಚಿ ಸ್ವಿಮ್ಮಿಂಗ್ ಫೂಲ್ ಅಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದರು.


