Thursday, June 4, 2026
Homeತಾಜಾ ಸುದ್ದಿಅದಾನಿ ಕಂಪನಿಗಳಲ್ಲಿ ಹೂಡಿಕೆಗೆ ಯೋಜನೆ ರೂಪಿಸಿಲ್ಲ; ಎಲ್ಐಸಿಯಿಂದ ಸ್ಪಷ್ಟೀಕರಣ

ಅದಾನಿ ಕಂಪನಿಗಳಲ್ಲಿ ಹೂಡಿಕೆಗೆ ಯೋಜನೆ ರೂಪಿಸಿಲ್ಲ; ಎಲ್ಐಸಿಯಿಂದ ಸ್ಪಷ್ಟೀಕರಣ

- Advertisement -
- Advertisement -

ನವದೆಹಲಿ: ಅದಾನಿ ಒಡೆತನದ ಕಂಪನಿಗಳಲ್ಲಿ ಎಲ್ಐಸಿ ಹೂಡಿಕೆಗೆ ಯೋಜನೆ ರೂಪಿಸಿದೆ ಎಂಬ ಆರೋಪಗಳಿಗೆ ಭಾರತೀಯ ಜೀವ ವಿಮಾ ನಿಗಮ ಸ್ಪಷ್ಟೀಕರಣ ನೀಡಿದೆ.

ಎಲ್ ಐಟಿ ತನ್ನ ಎಲ್ಲಾ ಹೂಡಿಕೆ ನಿರ್ಧಾರಗಳನ್ನು ಸಂಪೂರ್ಣವಾಗಿ ಸ್ವತಂತ್ರವಾಗಿ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದು, ಅದಾನಿ ಕಂಪನಿಗಳಿಗೆ ಹಣ ಹೂಡಿಕೆ ಮಾಡಲು ಎಲ್‌ಐಸಿ ಯಾವುದೇ ರೂಪುರೇಷೆ ಯೋಜನೆಯನ್ನು ಸಿದ್ಧಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತಾದ ಅಂತಾರಾಷ್ಟ್ರೀಯ ಮಾಧ್ಯಮ ವರದಿಯನ್ನು ತಳ್ಳಿ ಹಾಕಿರುವ ಜೀವ ವಿಮಾ‌ ನಿಗಮ, ಅತ್ಯುನ್ನತ ಮಟ್ಟದ ಶ್ರದ್ಧೆಯನ್ನು ಪಾಲಿಸುವುದಾಗಿ ಹೇಳಿದೆ.ಅಲ್ಲದೇ, ಹೂಡಿಕೆ ನಿರ್ಧಾರಗಳ ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯನ್ನು ಎಲ್ಐಸಿ ಸ್ಪಷ್ಟವಾಗಿ ಪ್ರತಿಪಾದಿಸಿದೆ

ಅದಾನಿ ಒಡೆತನದ ಕಂಪನಿಗಳಲ್ಲಿ ಹೂಡಿಕೆಗೆ ಭಾರತೀಯ ಜೀವ ವಿಮಾ ನಿಗಮ ಯೋಜನೆ ರೂಪಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗಿತ್ತು.

- Advertisement -

Latest News

error: Content is protected !!