Friday, June 5, 2026
Homeಕರಾವಳಿಮಂಗಳೂರುಮಂಗಳೂರು : ಮೂರು ಅಕ್ರಮ ಜಾನುವಾರು ವಧೆ ಸ್ಥಳಗಳನ್ನು ಜಪ್ತಿ ಮಾಡಿ ಮುಟ್ಟುಗೋಲು ಹಾಕಿದ ಪೊಲೀಸರು

ಮಂಗಳೂರು : ಮೂರು ಅಕ್ರಮ ಜಾನುವಾರು ವಧೆ ಸ್ಥಳಗಳನ್ನು ಜಪ್ತಿ ಮಾಡಿ ಮುಟ್ಟುಗೋಲು ಹಾಕಿದ ಪೊಲೀಸರು

- Advertisement -
- Advertisement -

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಘಟಕ ವ್ಯಾಪ್ತಿಯ ಮೂರು ಅಕ್ರಮ ಜಾನುವಾರು ವಧೆ ಸ್ಥಳಗಳನ್ನು ಜಪ್ತಿ ಮಾಡಿ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.

ಪ್ರಕರಣ; 1

ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆಬಳಿ ಎಂಬಲ್ಲಿ ನಾಸೀರ್‌ ಮತ್ತು ಇತರರು ದನವನ್ನು ತಂದು ವಧೆ ಮಾಡಿದ ಸ್ಥಳವಾದ ಇದಿನಬ್ಬರವರ ವಾಸದ ಮನೆ, ಕಸಾಯಿಖಾನೆಯ ಶೆಡ್‌ ಮತ್ತು ವಧೆ ಮಾಡಲು ಜಾನುವಾರನ್ನು ಕಟ್ಟು ಹಾಕಿದ ಶೆಡ್‌ ಅನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿಕೊಂಡು ಮುಟ್ಟುಗೋಲಿಗಾಗಿ ಉಪವಿಭಾಗಿ ದಂಡಾಧಿಕಾರಿ ಮಂಗಳೂರು ರವರಿಗೆ ವರದಿ ನೀಡಿದ್ದಾರೆ.

ಪ್ರಕರಣ; 2

ಬೆಳ್ತಂಗಡಿ ಪೊಲೀಸ್‌ ಠಾಣಾ 103/2025 ಕಲಂ ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020, 112 (2), 303(2)  ಬಿಎನ್‌ಎಸ್‌ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು,  ತನಿಖೆಯ ಸಮಯ ಆರೋಪಿಯು ಕೃತ್ಯಕ್ಕೆ ಬಳಸಿರುವ ಸ್ಥಳವಾದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬಳಿಯಿರುವ ಮಹಮ್ಮದ್‌ ರಫೀಕ್‌ ಅವರ ಮನೆ ಪ್ರಸ್ತುತ ಖಾಲಿ ಜಾಗವನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿ ಕೊಂಡು ಮುಟ್ಟುಗೋಲಿಗಾಗಿ ಉಪವಿಭಾಗಿ ದಂಡಾಧಿಕಾರಿ ಪುತ್ತೂರು ರವರಿಗೆ ವರದಿ ನೀಡಲಾಗಿದೆ.

ಪ್ರಕರಣ 3;

ಉಪ್ಪಿನಂಗಡಿ ಪೊಲೀಸ್ ಠಾಣಾ ಅಕ್ರ:76/2025, Sec:331(4), 305 BNS, 2023 ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ರಲ್ಲಿ ತನಿಖೆಯ ಸಮಯ ಆರೋಪಿ ಮೊಹಮ್ಮದ್‌ ಮನ್ಸೂರ ಎಂಬಾತನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಸ್ಥಳವಾದ ಮಂಗಳೂರು ನಗರ ವ್ಯಾಪ್ತಿಯ ಜೆ.ಎಮ್‌ ರಸ್ತೆ ಭಟ್ಕಳ ಬಜಾರ್‌ ಬಂದರ್‌ ಕುದ್ರೋಳಿ ಬಳಿಯಿರುವ ಕಟ್ಟಡವನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿ ಕೊಂಡು ಮುಟ್ಟುಗೋಲಿಗಾಗಿ ಉಪವಿಭಾಗಿ ದಂಡಾಧಿಕಾರಿ ಮಂಗಳೂರು ರವರಿಗೆ ವರದಿ ನೀಡಲಾಗಿರುತ್ತದೆ

ಈ ಹಿಂದೆ ರಾಜ್ಯದಲ್ಲಿಯೇಮೊದಲ ಬಾರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ಅಕ್ರ 123/2025 ಕಲಂ 303 ಬಿಎನ್‌ ಎಸ್‌ ಕಲಂ 4,7,12 ಗೋಸಂರಕ್ಷಣಾ ಕಾಯಿದೆ ಮತ್ತು 11(ಡಿ) ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ  ಪುದು ಗ್ರಾಮ ಪಂಚಾಯತ್‌ ವ್ಯಾಪ್ತಿಯ  ಮಾರಿಪಳ್ಳ ಹಸನಬ್ಬ ರವರ ಮನೆ/ಅಕ್ರಮ ಕಸಾಯಿಖಾನೆಯನ್ನು ಉಪವಿಭಾಗಿ ದಂಡಾಧಿಕಾರಿ ಮಂಗಳೂರು ಮುಟ್ಟುಗೋಲು ಹಾಕಿದ್ದರು.

ಮೂರು ಪ್ರಕರಣದಲ್ಲಿ ಕರ್ನಾಟಕ ಜಾನುವಾರು  ಹತ್ಯಾ  ಪ್ರತಿಬಂಧಕ  ಸಂರಕ್ಷಣಾ ಕಾಯ್ದೆ-2020  ಅಡಿಯಲ್ಲಿ ಕೃತ್ಯಕ್ಕೆ ಬಳಸಿರುವ ಸ್ಥಳ ಮತ್ತು ಕಟ್ಟಡಗಳನ್ನು ಜಪ್ತಿ ಮಾಡಲಾಗಿರುತ್ತದೆ. ಈ ಮೂಲಕ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಹಾಗೂ ಅಕ್ರಮ ಚಟುವಟಿಕೆಗಳಿಗೆ ಸ್ಥಳವಕಾಶ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

- Advertisement -

Latest News

error: Content is protected !!