- Advertisement -
![]()
- Advertisement -
ಬೆಂಗಳೂರು: ಅನಾರೋಗ್ಯದ ಕಾರಣದಿಂದಾಗಿ ಒಂದು ವಾರದ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಾಜಿ ಪ್ರದಾನಿ ಹೆಚ್.ಡಿ. ದೇವೇಗೌಡ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದಾರೆ.
ಜ್ವರ ಹಾಗೂ ಮೂತ್ರದ ಸೋಂಕಿನ ಸಮಸ್ಯೆಯಿಂದ ಒಂದು ವಾರದ ಹಿಂದೆ ದೇವೇಗೌಡರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸದ್ಯ ದೇವೇಗೌಡರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದ್ದು ಹದಿನೈದು ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
ಬಿಸಿಲು ಹಾಗೂ ಧೂಳಿನ ವಾತಾವರಣಕ್ಕೆ ಹೋಗಬಾರದು, ಮತ್ತೆ ಸೋಂಕು ತಗಲದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ದೇವೇಗೌಡರಿಗೆ ಸಲಹೆ ನೀಡಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ದೇವೇಗೌಡರನ್ನು ಅವರ ನಿವಾಸಕ್ಕೆ ಭೇಟಿ ನೀಡಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರವಿಸುಬ್ರಮಣ್ಯ ಸೇರಿದಂತೆ ಹಲವರು ಆರೋಗ್ಯ ವಿಚಾರಿಸಿದ್ದಾರೆ.
- Advertisement -


