Saturday, June 13, 2026
Homeಕರಾವಳಿಮಂಗಳೂರುಬಂಟ್ವಾಳ: ಮಾರಾಟ ಮಾಡಲು ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ

ಬಂಟ್ವಾಳ: ಮಾರಾಟ ಮಾಡಲು ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ

- Advertisement -
- Advertisement -

ಬಂಟ್ವಾಳ: ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಗೂಡಿನಬಳಿ ನಡೆದಿದೆ. ಅಬ್ದುಲ್ ಮಜೀದ್ ಹಾಗೂ ಅಬ್ದುಲ್ ಸಾದಿಕ್ ಬಂಧಿತರು.

ಕಾನೂನು ಸುವ್ಯವಸ್ಥೆಯ ಪಿ ಎಸ್‌ ಐ ಸಂದೀಪ ಕುಮಾರ ಶೆಟ್ಟಿ ರವರು ದಿನಾಂಕ 08-10-2025 ರಂದು ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿ ಬೆಳಿಗ್ಗೆ 11.50 ಗಂಟೆಗೆ ಗೂಡಿನಬಳಿಯಲ್ಲಿರುವ ಸಮಯ ಪಾಣೆಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಒಂದು ಮೋಟಾರು ಸೈಕಲಿನಲ್ಲಿ ಇಬ್ಬರು ಹೆಲ್ಮೆಟ್‌ ಧರಿಸದೆ ಬರುತ್ತಿದ್ದು aarop ನಿಲ್ಲಿಸುವಂತೆ ಸೂಚನೆ ನೀಡಿದಾಗ ಮೋಟಾರು ಸೈಕಲನ್ನು ನಿಲ್ಲಿಸದೆ ಗೂಡಿನಬಳಿ ಹೋಗುವ ರಸ್ತೆಗೆ ತಿರುಗಿಸಿ ಹೋದವರನ್ನು ಕೈಕುಂಜೆ ರೈಲ್ವೇ ಸ್ಟೇಷನ್‌ ಬಳಿ ಗೂಡಿನ ಬಳಿಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಮೋಟಾರು ಸೈಕಲ್‌ ನ್ನು ಸವಾರ ಮತ್ತು ಸಹ ಸವಾರನನ್ನು ಸುತ್ತುವರಿದು ವಿಚಾರಿಸಿದಾಗ, ಸಹ ಸವಾರನ ಅಬ್ದುಲ್ ಸಾಧಿಕ್ ಹಾಗೂ ಬೈಕ್‌ ಸವಾರ ಅಬ್ದುಲ್ ಮಜೀದ್ ರವರು ಬೈಕ್ ನಲ್ಲಿ ದಿನಾಂಕ 25-09-2025 ರಂದು ಬೊಲೋರೋ ಪಿಕಪ್ ವಾಹನದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಸಮಯ ಅಬಕಾರಿ ಇಲಾಖೆಯವರು ಪಿಕ್ ಅಪ್ ನ್ನು ಬೆನ್ನಟ್ಟಿಕೊಂಡು ಬಂದಿದ್ದು ಅವರಿಗೆ ಸಿಗದ ಹಾಗೆ ಪಿಕ್ ಅಪ್ ನ್ನು ಚಲಾಯಿಸಿಕೊಂಡು ಹೋಗಿ ನಂದಾವರ ಎಂಬಲ್ಲಿ ರೈಲ್ವೇ ಗೆ ಸಂಬಂದಿಸಿದ ಖಾಲಿ ಜಾಗದಲ್ಲಿ ನಿಲ್ಲಿಸಿ ಅಲ್ಲಿಂದ ಗಾಂಜಾದ ಸಮೇತ ಪರಾರಿಯಾಗಿ ಗಾಂಜಾವನ್ನು ಸ್ನೇಹಿತ ಮಜೀದನ ಮನೆಯಲ್ಲಿ ಇಟ್ಟಿದ್ದು ಆ ಗಾಂಜಾವನ್ನು ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು. ಈ ಮೊದಲು ಫರಂಗಿಪೇಟೆಯ ಚೋಟಾ ಅಶ್ರಪ್ ಮತ್ತು ಫರಂಗಿಪೇಟೆಯ ಅಜರುದ್ದೀನ್ ಎಂಬವರಿಗೆ ಮಾರಾಟ ಮಾಡಿದ್ದು ಹೆಚ್ಚಿನದನ್ನು ಅವರಿಗೆ ಮಾರಾಟ ಮಾಡಲು ಅವರು ಸಿಗದಿದ್ದರೆ ಮಂಗಳೂರು ಕಡೆಗೆ ಬೇರೆ ಗಿರಾಕಿಗಳಿಗೆ ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ತಿಳಿಸಿರುವುದಾಗಿದೆ. 5 ಕಟ್ಟು ಪ್ಲಾಸ್ಟಿಕ್ ಸಹಿತ ಗಾಂಜಾದ ಒಟ್ಟು ತೂಕ 8.790 ಕಿಲೋ ಗ್ರಾಂ ಆಗಿದ್ದು ಒಟ್ಟು ಅಂದಾಜು ಮೌಲ್ಯ ರೂ 88.700/- ಆಗಬಹುದು. ಮತ್ತು ಆರೋಪಿ ಅಬ್ದುಲ್‌ ಮಜೀದ್‌ ನ ಬಾಬ್ತು ಬೈಕನ್ನು ವಶಕ್ಕೆ ಪಡೆಯಲಾಯಿತು. ಅದರ ಅಂದಾಜು ಬೆಲೆ ರೂ 1,00,000/- ಆಗಬಹುದು. ವಶಪಡಿಸಿಕೊಂಡ ಇತರೆ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ ರೂ 2,17,460/-ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 116/2025 ಕಲಂ: 8(c ), 20(b) (ii) (B) NDPS & U/s 3(5) BNS ಯಂತೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

- Advertisement -

Latest News

error: Content is protected !!