- Advertisement -
![]()
- Advertisement -
ಮಂಗಳೂರ:ಮೈಸೂರು ದಸರಾ ಜಂಬೂ ಸವಾರಿ (ಮೆರವಣಿಗೆ)ಯಲ್ಲಿ ಸ್ತಬ್ಧಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ತನ್ನ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ ಗಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪರಂಪರೆ, ಸಾಂಸ್ಕೃತಿಕ ಹಾಗೂ ಕಲೆಯ ಕೂಡುವಿಕೆಯಿಂದ ಈ ಸ್ತಬ್ಧಚಿತ್ರವು ನೋಡುಗರ ಮನಸೂರೆಗೊಳಿಸಿತು.
ಇದರಲ್ಲಿ ಯಕ್ಷಗಾನ, ಕಂಬಳ, ಹುಲಿವೇಷ ಮತ್ತು ಇತರ ಜನಪದ ಹಾಗೂ ಸಾಂಪ್ರದಾಯಿಕ ಕ್ರೀಡೆಗಳ ವರ್ಣರಂಜಿತ ಚಿತ್ರಣವಿತ್ತು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಸ್ತಬ್ಧಚಿತ್ರವನ್ನು ರಚಿಸಲಾಗಿತ್ತು. ಗ್ರಾಮೀಣ ಕೈಗಾರಿಕೆಗಳ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಹೆಗ್ಡೆ ಅವರು ಈ ಯೋಜನೆಗೆ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
- Advertisement -


