Friday, June 5, 2026
Homeಕರಾವಳಿಮಂಗಳೂರುಮಂಗಳೂರು; 3 ತಿಂಗಳ ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಸಮಾರೋಪ ಸಮಾರಂಭ

ಮಂಗಳೂರು; 3 ತಿಂಗಳ ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಸಮಾರೋಪ ಸಮಾರಂಭ

- Advertisement -
- Advertisement -

ಮಂಗಳೂರು; ಸಿದ್ಧಕಟ್ಟೆ ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಮಂಗಳೂರು, ಸಿಸಿ ಟೆಕ್ ತಾಂತ್ರಿಕ ಶಿಕ್ಷಣ ಘಟಕ ಮಂಗಳೂರು ಇದರ ಸಹಭಾಗಿತ್ವದಲ್ಲಿ ನಡೆದಿರ ತಕ್ಕಂತಹ ಮೂರು ತಿಂಗಳ ಉಚಿತ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಸಮಾರೋಪ ಸಮಾರಂಭವು  26/09/2025  ರಂದು ನೆರವೇರಿತು.

 ರೊ. ಮೈಕಲ್ ಡಿಕೋಸ್ತ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರೊ. ದುರ್ಗಾದಾಸ್ ಶೆಟ್ಟಿ ಅಧ್ಯಕ್ಷರು ರೋಟರಿ ಕ್ಲಬ್ ಫಲ್ಗುಣಿ ಸಿದ್ದಕಟ್ಟೆ ಇವರು ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು . ಮುಖ್ಯ ಅತಿಥಿಗಳಾಗಿ  ಶ್ರೀಯುತ ನಾರಾಯಣಸ್ವಾಮಿ ಪ್ರಾಂಶುಪಾಲರು ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಮಂಗಳೂರು,  ರೊ. PHF ರಾಮಚಂದ್ರ ಶೆಟ್ಟಿಗಾರ್,  ಶ್ರೀಯುತ ರವೀಂದ್ರ ಎಂ ಕೇಣಿ ಮ್ಯಾನೇಜರ್ ಸಿಸಿ ಟೆಕ್ ತಾಂತ್ರಿಕ ಶಿಕ್ಷಣ ಘಟಕ ಮಂಗಳೂರು, ಶ್ರೀಯುತ ದೇವರಾಜ್ ಆಟೋಮೊಬೈಲ್ ವಿಭಾಗ ಮುಖ್ಯಸ್ಥರು ಕರ್ನಾಟಕ ಪಾಲಿಟೆಕ್ಟಿಕ್ ಮಂಗಳೂರು, ರೋಟರಿ ಕ್ಲಬ್ ನ ಕಾರ್ಯದರ್ಶಿಯಾದ ರೊ. ಟೀನಾ ಡಿಕೋಸ್ತ , ತರಬೇತಿಯ ಗುರುಗಳಾದ ಕು. ಕೆ.  ಪ್ರೇಮ ರವರು ಉಪಸ್ಥಿತರಿದ್ದರು.  ಹಾಗೆ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ  ಸದಸ್ಯರು ಉಪಸ್ಥಿತರಿದ್ದರು. ಗುರುಗಳಾದ ಕುಮಾರಿ ಕೆ. ಪ್ರೇಮ ರವರನ್ನು ವಿದ್ಯಾರ್ಥಿಗಳು ಹಾಗೂ ರೋಟರಿವತಿಯಿಂದ ಸನ್ಮಾನಿಸಲಾಯಿತು. ರೊ. ಮೈಕಲ್ ಡಿಕೋಸ್ತಾ ರವರು ವಿದ್ಯಾರ್ಥಿಗಳಿಗೆ  ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಲೀನಾ ಥಾಮಸ್ ಲೋಬೊ, ಶ್ರೀಮತಿ ಪ್ರೆಸಿಲ್ಲ ಡಿಕೋನ್ನ , ರೊ. ಮೈಕಲ್ ಡಿಕೋಸ್ತ ಇವರನ್ನು ಸನ್ಮಾನಿಸಲಾಯಿತು.  ರೊ. ಗಣೇಶ್ ಶೆಟ್ಟಿ, ರೊ. ಥಾಮಸ್ ಡಿಕೋಸ್ತ , ರೊ. ಪದ್ಮನಾಭ, ರೊ. ಜೈಸನ್, ರೊ. ನೋನಯ್ಯ ಶೆಟ್ಟಿಗಾರ್, ರೊ. ಪ್ರಮೀಳ, ರೊ. ಹರೀಶ್, ರೊ. ಹೊನ್ನಯ್ಯ ಕಾಟಿಪಳ್ಳ, KPT ಸಿಬ್ಬಂದಿ ರೊನಾಲ್ಡ ಮಿರಾಂದ  ಹಾಗೂ ಇತರರು ಪಾಲ್ಗೊಂಡರು.

3000 ಮಹಿಳೆಯರಿಗೆ ಹೊಲಿಗೆ ಹಾಗೂ ಫ್ಯಾಶನ್ ಡಿಸೈನ ಕಲಿಸಿದ ಕುಮಾರಿ ಪ್ರೇಮ ಕೆ. ಇವರಿಗೆ ಊರ ಹಾಗೂ ರೋಟರಿ ಸನ್ಮಾನ ಮಾಡಲಾಯಿತು. ಇವರು 1250 ಮಂದಿ ಮಹಿಳೆಯರಿಗೆ ಹೊಲಿಗೆ ಕಲಿಯಲು ಸ್ಥಳಾವಕಾಶ ಹಾಗೂ ಪ್ರಾಯೋಜಕತ್ವ ನೀಡಿದ ಹಾಗೂ 250 ರಷ್ಟು ಹೊಲಿಗೆ ಯಂತ್ರಗಳನ್ನು ವಿತರಿಸಿದ ಮೈಕಲ್ ಡಿಕೋಸ್ತಾ ರವರಿಗೆ ಸನ್ಮಾನಿಸಿದರು.ಶ್ರೀಮತಿ ಮಮತಾ ಸ್ವಾಗತಿಸಿದರು. ಶ್ರೀಮತಿ ರಾಜಶ್ರೀ ಭಟ್ ಪ್ರಾರ್ಥಿಸಿದರು. ಶ್ರೀಮತಿ ಟೀನಾ ಡಿಕೋಸ್ತ ವಂದಿಸಿದರು. ಶ್ರೀಮತಿ ಶ್ರೀಶಂಕರಿ ಕಾರ್ಯಕ್ರಮ ನಿರೂಪಣೆಗೈದರು.

- Advertisement -

Latest News

error: Content is protected !!