Friday, June 5, 2026
Homeಕರಾವಳಿಸವಣಾಲಿನಲ್ಲಿ 'ಜ್ಞಾನಜ್ಯೋತಿ' ಗ್ರಂಥಾಲಯದ ಉದ್ಘಾಟನಾ ಸಮಾರಂಭ

ಸವಣಾಲಿನಲ್ಲಿ ‘ಜ್ಞಾನಜ್ಯೋತಿ’ ಗ್ರಂಥಾಲಯದ ಉದ್ಘಾಟನಾ ಸಮಾರಂಭ

- Advertisement -
- Advertisement -

ಬೆಳ್ತಂಗಡಿ: ಶ್ರೀ ಲಕ್ಷ್ಮೀನಾರಾಯಣ ಎಜುಕೇಶನಲ್ ಸೊಸೈಟಿ (ರಿ), ಸವಣಾಲು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅನುದಾನಿತ ಹಿ.ಪ್ರಾ. ಶಾಲೆ, ಸವಣಾಲು ಮತ್ತು ಗ್ರಾಮ ಪಂಚಾಯತ್ ಮೇಲಂತಬೆಟ್ಟು, ಲಯನ್ಸ್ ಕ್ಲಬ್ ಬೆಳ್ತಂಗಡಿ ಇವುಗಳ ಸಹಯೋಗದೊಂದಿಗೆ ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಒದಗಿಸಲ್ಪಟ್ಟಂತಹ  ‘ಜ್ಞಾನಜ್ಯೋತಿ’ ಗ್ರಂಥಾಲಯದ ಉದ್ಘಾಟನಾ ಸಮಾರಂಭವು 2025 ಅ. 01 ಬುಧವಾರದಂದು ಬೆಳಿಗ್ಗೆ 11-00 ಗಂಟೆಗೆ ನಡೆಯಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಲಿದ್ದಾರೆ ಶ್ರೀಮತಿ ಸವಿತಾ, ಅಧ್ಯಕ್ಷರು, ಗ್ರಾಮ ಪಂಚಾಯತ್ ಮೇಲಂತಬೆಟ್ಟು, ಉದ್ಘಾಟನೆಯನ್ನು ಮಾಡಲಿದ್ದಾರೆ ಲ. ಮುರಳಿ ಐಲಿಪ, ಅಧ್ಯಕ್ಷರು, ಲಯನ್ಸ್ ಕ್ಲಬ್ ಬೆಳ್ತಂಗಡಿ,  ಮುಖ್ಯ ಅತಿಥಿಗಳಾಗಿ ಶ್ರೀ ಗಜಾನನ ಭಟ್, ಸುರಭಿ ಹೆಬ್ಬರ ಹಿತ್ತಿಲು, ನಿವೃತ್ತ ಎ.ಸಿ.ಎಫ್, ಲ। ಬಿ. ರಘುರಾಮ ಗಾಂಭೀರ, ನಿಕಟಪೂರ್ವ ಅಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ಲೋಕನಾಥ ಶೆಟ್ಟಿ. ಉಪಾಧ್ಯಕ್ಷರು. ಗ್ರಾ.ಪಂ. ಮೇಲಂತಬೆಟ್ಟು, ಶ್ರೀ ಕೃಷ್ಣಪ್ಪ ಗೌಡ ದೇವಸ, ಪ್ರಗತಿಪರ ಕೃಷಿಕರು ವೇದಿಕೆಯಲ್ಲಿ ಇರಲಿದ್ದಾರೆ.

ಗೌರವ ಉಪಸ್ಥಿತಿಯಲ್ಲಿ ಶ್ರೀ ಪ್ರಭಾಕರ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ಚಂದ್ರಶೇಖರ, ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ಸುಮಲತಾ, ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ಜಯಲಕ್ಷ್ಮೀ, ಗ್ರಾಮ ಪಂಚಾಯತ್‌ ಸದಸ್ಯರು, ಶ್ರೀಮತಿ ಶಶಿಕಲಾ, ಗ್ರಾಮ ಪಂಚಾಯತ್‌ ಸದಸ್ಯರು, ಶ್ರೀ ನಿರ್ಮಲ ಕುಮಾರ್. ಪ್ರಭಾರ ಪಿಡಿಓ ಗ್ರಾ.ಪಂ. ಮೇಲಂತಬೆಟ್ಟು, ಶ್ರೀ ದಯಾನಂದ ರೈ ಕಡೆಮಜಲು, ಅಧ್ಯಕ್ಷರು ಆಡಳಿತ ಮಂಡಳಿ, ಶ್ರೀ ಗಣೇಶ್ ಭಂಡಾರಿ, ಅಧ್ಯಕ್ಷರು, ಶಾಲಾ ಅಭಿವೃದ್ಧಿ ಸಮಿತಿ, ಶ್ರೀ ಮಂಜುನಾಥ ಜಿ. ಮುಖ್ಯೋಪಾಧ್ಯಾಯರು ಉಪಸ್ಥಿತಿಯಲ್ಲಿರುವರು.

ಅತ್ಮೀಯ ವಿದ್ಯಾಭಿಮಾನಿಗಳಾದ ತಾವುಗಳು ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಲಕ್ಷ್ಮಿನಾರಾಯಣ ಎಜುಕೇಶನಲ್ ಸೊಸೈಟಿ ಸವಣಾಲಿನ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲಾ ಮುಖ್ಯೋಪಾಧಾಯ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ವಿ.ಸೂ. : ಅದೇ ದಿನ ಬೆಳಿಗ್ಗೆ 9-00 ಗಂಟೆಯಿಂದ ಶಾಲೆಯಲ್ಲಿ ಶ್ರೀ ಶಾರದಾ ಪೂಜೆ ನಡೆಯುತ್ತದೆ.

- Advertisement -

Latest News

error: Content is protected !!