ಬೆಳ್ತಂಗಡಿ; ಓಡದಕರಿಯ ದುರ್ಗಾಪರಮೇಶ್ವರಿ ದೇಗುಲದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಸೆಪ್ಟಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ.
ನವರಾತ್ರಿಯ ಎಲ್ಲಾ ದಿನಗಳಲ್ಲಿ ನಿತ್ಯ ಪೂಜೆ ಬೆಳಿಗ್ಗೆ 08.00 , ಮಧ್ಯಾಹ್ನ 12.30 ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 07.00 ರಿಂದ ವಿವಿಧ ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ 08.30 ಮಹಾ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 22.09.2025 ಸೋಮವಾರ ಬೆಳಿಗ್ಗೆ ತೋರಣ ಮುಹೂರ್ತ,ತೆನೆ ಮೂಹೂರ್ತ, ಪಂಚಾಮೃತ ಅಭಿಷೇಕ ಮಹಾಪೂಜೆ ಪುದ್ದರ್.

ದಿನಾಂಕ 27.09.2025 ಶನಿವಾರ : ಬೆಳಿಗ್ಗೆ ನಾಗ ಸಾನಿಧ್ಯದಲ್ಲಿ ತಂಬಿಲ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ನವಕ ಪ್ರಧಾನ ಹೋಮ ನವಕಲಶಾಭಿಷೇಕ ಮಹಾಪೂಜೆ , ರಾತ್ರಿ ದುರ್ಗಾ ನಮಸ್ಕಾರ ಪೂಜೆ.
ದಿನಾಂಕ 02.10.2025 ಗುರುವಾರ ಪಂಚಾಮೃತ ಅಭಿಷೇಕ, ಅಶ್ವಥ ಪೂಜೆ , ನಾಗ ಸಾನಿಧ್ಯದಲ್ಲಿ ತಂಬಿಲ, ಮೈಸಾಂದಯ ಲೆಕ್ಕೆ ಸಿರಿ , ಜಮಾದಿ ಬಂಟ , ಪಂಜುರ್ಲಿ ದೈವಗಳ ಸಾನಿಧ್ಯದಲ್ಲಿ ಪರ್ವ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ ನಡೆಯಲಿದೆ. ಭಕ್ತಾದಿಗಳಿಗೆ ಆದರದ ಸ್ವಾಗತ ಕೋರಲಾಗಿದೆ.


