Thursday, June 4, 2026
Homeತಾಜಾ ಸುದ್ದಿಬ್ಯೂಟಿ ಪಾರ್ಲರ್‌, ಸಲೂನ್ ಸೆಂಟರ್​ಗಳಿಗೆ ಬರಲಿದೆ ಕಠಿಣ ನಿಯಮ; ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆಗೆ...

ಬ್ಯೂಟಿ ಪಾರ್ಲರ್‌, ಸಲೂನ್ ಸೆಂಟರ್​ಗಳಿಗೆ ಬರಲಿದೆ ಕಠಿಣ ನಿಯಮ; ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆಗೆ ಚಿಂತನೆ

- Advertisement -
- Advertisement -

ಆರೋಗ್ಯ ಇಲಾಖೆ ಇದೀಗ ಬ್ಯೂಟಿ ಪಾರ್ಲರ್‌, ಸಲೂನ್ ಸೆಂಟರ್​ಗಳಿಗೆ ಕಠಿಣ ನಿಯಮಗಳನ್ನೊಳಗೊಂಡ ಮಾರ್ಗಸೂಚಿ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಅನೇಕ ಸಲೂನ್​​ಗಳಲ್ಲಿ, ಬ್ಯೂಟಿ ಪಾರ್ಲರ್‌ಗಳಲ್ಲಿ ಪ್ರಮಾಣಪತ್ರ ಇಲ್ಲದವರು ಕೂಡಾ ಕೆಲಸ ಮಾಡುತ್ತಿದ್ದಾರೆ. ಫೇಶಿಯಲ್ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಚಿಕಿತ್ಸೆಗಳನ್ನು ಜನರು ಪಡೆಯುತ್ತಾರೆ. ಸಲೂನ್ ಸೆಂಟರ್​​ಗಳಲ್ಲಿಯೂ ಕೂಡಾ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಪ್ರಾಕ್ಟಿಸ್​​ಗಳನ್ನು ಮಾಡಿ ಜನರ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಎಂಬಿಬಿಎಸ್ ಪ್ರಾಕ್ಟೀಸ್ ಮಾಡದೇ ಬ್ಯೂಟಿ ಕ್ಲಿನಿಕ್​ಗಳಲ್ಲಿ ಕೆಲವರು ರಾಸಾಯನಿಕ ಚಿಕಿತ್ಸೆ ನೀಡುತ್ತಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಯಲ್ಲಿ MD, DNB, DVL, DDV ಹಾಗೂ Mch, ಪ್ಲಾಸ್ಟಿಕ್ ಸರ್ಜರಿ ಪಿ.ಜಿ ಅರ್ಹತೆ ಇಲ್ಲದೇ ಚಿಕಿತ್ಸೆ ಕೊಡುತ್ತಿದ್ದಾರೆ. ಇದರಿಂದ ಅನೇಕರು ಚರ್ಮ ಸಂಬಂಧಿ ಸಮಸ್ಯೆ‌ಗಳಿಂದ ಬಳಲುತ್ತಿದ್ದಾರೆ. ಪ್ರಾಣಕ್ಕೂ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಸಲೂನ್ ಸೆಂಟರ್, ಮಸಾಜ್ ಸೆಂಟರಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಮುಂದಾಗಿದೆ. ಸಾಕಷ್ಟು ದೂರುಗಳು ಬಂದ ಕಾರಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಡರ್ಮಟಾಲಿಸ್ಟ್ ಅಸೋಸಿಯೇಷನ್ ಇಲಾಖೆಯ ನಿರ್ಧಾರವನ್ನು ಸ್ವಾಗತಿಸಿದೆ. ಈ ಹಿಂದೆಯೂ ಕೂಡಾ ಅನೇಕ ಬಾರಿ ಆರೋಗ್ಯ ಇಲಾಖೆಗೆ ಅಸೋಸಿಯೇಷನ್‌ನಿಂದ ದೂರನ್ನು ನೀಡಲಾಗಿತ್ತು. ಮಾರ್ಗಸೂಚಿಯಿಂದ ಜನರಿಗೆ ಹಣ ಉಳಿಯುವುದರ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಚರ್ಮ ರೋಗ ತಜ್ಞರ ಸಂಘಟನೆಯ ಸದಸ್ಯ ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.

- Advertisement -

Latest News

error: Content is protected !!