- Advertisement -
![]()
- Advertisement -
ಬಂಟ್ವಾಳ: ಕಲ್ಲಡ್ಕ ಸಮೀಪದ ಪಟ್ಟೆಕೋಡಿಯಲ್ಲಿ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ನಗರ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಸುಮಾರು 80 ಸಾವಿರ ರೂ. ಮೌಲ್ಯದ 25 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಲ್ಲಡ್ಕ ನಿವಾಸಿಗಳಾದ ಉಗ್ರಾಣ ವ್ಯವಸ್ಥಾಪಕ ಉಮ್ಮರಬ್ಬ ಅಲಿಯಾಸ್ ಪುಟ್ಟುಮೋನು (47) ಮತ್ತು ಕಾರ್ಮಿಕ ರಫೀಕ್ (42) ಆರೋಪಿಗಳು. ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
- ಆರೋಪಿಯಲ್ಲಿ ಓರ್ವನಾದ ಉಮ್ಮರಬ್ಬ ಎಂಬಾತನು ಆತನ ಗೋದಾಮಿನಲ್ಲಿ ಪಡಿತರ ವಿತರಣೆಯ 21.04 ಕ್ವಿಂಟಾಲ್ ಬೆಳ್ತಿಗೆ ಹಾಗೂ 4.67 ಕ್ವಿಂಟಾಲ್ ಕುಚಲಕ್ಕಿಯನ್ನು ದಾಸ್ತಾನಿರಿಸಿದ್ದನು. ದಾಳಿಯ ವೇಳೆ ತೂಕ ಮಾಪನ ಯಂತ್ರ, ಗೋಣಿ ಚೀಲಗಳು, ಅಕ್ಕಿ ಸಾಗಾಟದ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳಿಗೆ ಪಡಿತರ ಅಕ್ಕಿ ಹೇಗೆ ಲಭಿಸಿತು ಎಂಬ ಕುರಿತು ತನಿಖೆ ನಡೆಯಬೇಕಿದೆ.
ಇನ್ನು ಅಕ್ರಮ ದಾಸ್ತಾನು ಅಕ್ಕಿಯನ್ನು ಪಡಿತರ ಅಕ್ಕಿ ಪಡೆದವರಿಂದ ಖರೀದಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಟ್ವಾಳ ಆಹಾರ ನಿರೀಕ್ಷಕ ಪ್ರಶಾಂತ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


