Friday, June 5, 2026
Homeತಾಜಾ ಸುದ್ದಿಪುತ್ರಿಯ ಆನ್ಲೈನ್ ಶಿಕ್ಷಣಕ್ಕೆ 'ಏಕೈಕ ಹಸು' ಮಾರಿದ ಘಟನೆಗೆ ಟ್ವಿಸ್ಟ್ ಕೊಟ್ಟ ಅಧಿಕಾರಿಗಳು

ಪುತ್ರಿಯ ಆನ್ಲೈನ್ ಶಿಕ್ಷಣಕ್ಕೆ ‘ಏಕೈಕ ಹಸು’ ಮಾರಿದ ಘಟನೆಗೆ ಟ್ವಿಸ್ಟ್ ಕೊಟ್ಟ ಅಧಿಕಾರಿಗಳು

- Advertisement -
- Advertisement -

ಶಿಮ್ಲಾ: ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿರುವ ಸುದ್ದಿ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು. ಆದರೆ ಈ ಸುದ್ದಿ ಸುಳ್ಳು ಎನ್ನಲಾಗಿದೆ.

ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿರುವ ಸುದ್ದಿ ದೇಶಾದ್ಯಂತ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಬಾಲಿವುಡ್ ನಟ ಸೋನು ಸೂದ್ ಆದಿಯಾಗಿ ಖ್ಯಾತನಾಮರು ರೈತ ಕುಲದೀಪ್ ಕುಮಾರ್ ಅವರಿಗೆ ನೆರವಿನ ಹಸ್ತ ಚಾಚಿದ್ದರು. ಆದರೆ ರೈತನ ಈ ಸುದ್ದಿ ಸುಳ್ಳು ಎಂಬುದನ್ನು ಸ್ಥಳೀಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.

ತಮ್ಮ ಮಕ್ಕಳಿಗೆ ಕ್ಲಾಸ್‌ ಮಿಸ್‌ ಆಗಬಾರದು ಎನ್ನುವ ಕಾರಣಕ್ಕೆ ಕುಟುಂಬದ ಏಕೈಕ ಆಧಾರವಾಗಿರುವ ಹಸುವನ್ನೇ ಮಾರಾಟ ಮಾಡಿ ಸ್ಮಾರ್ಟ್‌ಫೋನ್‌ ತರಿಸಿಕೊಟ್ಟಿರುವುದಾಗಿ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ತಹಸಿಲ್‌ನ ಗುಮ್ಮರ್ ಗ್ರಾಮದ ನಿವಾಸಿ ಕುಲದೀಪ್ ಕುಮಾರ್ ಅವರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ತಮ್ಮ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು, ಆದ್ದರಿಂದ ಹಸುವನ್ನು ಮಾರಿರುವುದಾಗಿ ಹೇಳಿದ್ದಾರೆ ಎಂದೂ ಸ್ಥಳೀಯ ಪತ್ರಿಕೆಯಲ್ಲಿ ತಿಳಿಸಲಾಗಿತ್ತು.

ಕಾಂಗ್ರಾ ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಪರಿಶೀಲನೆಗೆ ತೆರಳಿದಾಗ ಹಸುಗಳನ್ನು ಕಟ್ಟಲು ಕೊಟ್ಟಿಗೆಯಲ್ಲಿ ಜಾಗವಿಲ್ಲದೆ 1 ಹಸು ಮಾರಾಟ ಮಾಡಿರುವುದು ಗೊತ್ತಾಗಿದೆ. ರೈತ ಕುಲದೀಪ್ ಅವರ ಕೊಟ್ಟಿಗೆಯಲ್ಲಿ 7 ಹಸುಗಳಿದ್ದು, ಅವುಗಳಿಗೆ ಜಾಗವಿರಲಿಲ್ಲ. ಈ ಕಾರಣದಿಂದ ಹಸು ಮಾರಾಟ ಮಾಡಿದ್ದ. ಬಂದ ಹಣದಲ್ಲಿ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದ. ಕುಲದೀಪ್ ಮನೆ ಸಮೀಪದಲ್ಲೇ ಸರ್ಕಾರಿ ಶಾಲೆ ಇದ್ದರೂ ಕೂಡ ಮಕ್ಕಳನ್ನು ದುಬಾರಿ ಶುಲ್ಕದ ಖಾಸಗಿ ಶಾಲೆಗೆ ಸೇರಿಸಿದ್ದಾರೆ ಎನ್ನುವುದು ಗೊತ್ತಾಗಿದೆ.

- Advertisement -

Latest News

error: Content is protected !!