ಬೆಂಗಳೂರು: ಬಿಎಲ್ ಸಂತೋಷ್ ಬಗ್ಗೆ ಏನೋ ಮಾತನಾಡಿದ್ದಾನೆ. ಅದಕ್ಕೆ ಅವನನ್ನ ಒದ್ದು ಒಳಗೆ ಹಾಕ್ಸಿದ್ದೀವಿ ಎಂದು ಧರ್ಮಸ್ಥಳ ಕೇಸ್ ನಲ್ಲಿ ಭಾರೀ ಸದ್ದು ಮಾಡ್ತಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ತಿಮರೋಡಿ ಠುಸ್ ಗಿರಾಕಿ. ಆತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಬಗ್ಗೆ ಏನೋ ಮಾತನಾಡಿದ್ದಾನೆ. ಅದಕ್ಕೆ ಒದ್ದು ಒಳಗೆ ಹಾಕ್ಸಿದ್ದೀವಿ. ಆರೋಪ ಮಾಡಲು ಅವನತ್ರ ಯಾವುದೇ ದಾಖಲೆಗಳಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ ಹೌದು. ಆದರೆ ನಮ್ಮಲ್ಲಿ ರಾಜಕೀಯವಾಗಿ ಏನೇ ವಿರೋಧ ಇರಬಹುದು. ಆದರೆ ನಮ್ಮ ವಿರೋಧ ಪಕ್ಷದ ನಾಯಕರ ಬಗ್ಗೆ ಆಧಾರವಿಲ್ಲದೇ ಆರೋಪ ಮಾಡಿದ್ದಕ್ಕೆ ತಕ್ಕ ಕ್ರಮ ಕೈಗೊಂಡಿದ್ದೀವಿ ಎಂದರು.
ಸಿಎಂ ಬಗ್ಗೆನೂ ಹೇಳಿಕೆ ನೀಡಿದ್ರು. ಅದೂ ಸರಿಯಲ್ಲ. ಏನೇ ವಿರೋಧಗಳಿರಲಿ, ಅದಕ್ಕೆ ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಇಲ್ಲದೇ ಏನೇನೋ ಮಾತನಾಡೋದಲ್ಲ’ ಎಂದು ಡಿಕೆಶಿ ಖಡಕ್ ಆಗಿ ಹೇಳಿದ್ದಾರೆ.


