Friday, June 5, 2026
Homeತಾಜಾ ಸುದ್ದಿಪಣಂಬೂರಿನಲ್ಲಿ ಮಹಿಳೆ ನಾಪತ್ತೆ; ಸಾರ್ವಜನಿಕರ ಸಹಾಯಕ್ಕೆ ಆಗ್ರಹ

ಪಣಂಬೂರಿನಲ್ಲಿ ಮಹಿಳೆ ನಾಪತ್ತೆ; ಸಾರ್ವಜನಿಕರ ಸಹಾಯಕ್ಕೆ ಆಗ್ರಹ

- Advertisement -
- Advertisement -
  • ಮಂಗಳೂರು: ಪಣಂಬೂರು ಕೈಗಾರಿಕಾ ಪ್ರದೇಶದ ಭಟ್ರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಮಹಿಳೆಯೋರ್ವಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ನಾಪತ್ತೆಯಾದವರು ಲಕ್ಷ್ಮಿಬಾಯಿ ಪರತಗೌಡ (49) ಎನ್ನಲಾಗಿದೆ.

ಉರ್ವ ಸ್ಟೋರ್ ಕಡೆಗೆ ಲಕ್ಷ್ಮಿಬಾಯಿ ಪರತಗೌಡ ಅವರು ಜೂನ್ 20, 2025 ರಂದು ಕೆಲಸಕ್ಕೆಂದು ಹೋಗಿದ್ದು ಮರಳಿ ಬಾರದೆ ಕಾಣೆಯಾಗಿದ್ದಾರೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗ ಸಾರ್ವಜನಿಕರಿಂದ ಸಹಾಯ ಕೋರುವಂತೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.

  • ಕಾಣೆಯಾದ ಮಹಿಳೆಯ ವಿವರಗಳು :
    ಹೆಸರು : ಲಕ್ಷ್ಮಿಬಾಯಿ ಪರತಗೌಡ
    ವಯಸ್ಸು: 49 ವರ್ಷ
    ಗಂಡನ ಹೆಸರು : ಬಸವರಾಜ್ ಪರತಗೌಡ
    ಎತ್ತರ: ಸುಮಾರು 5 ಅಡಿ
    ಶರೀರದ ಲಕ್ಷಣ: ದಪ್ಪ ಮೈಕಟ್ಟು, ಕಪ್ಪು ಮೈಬಣ್ಣ, ಬಿಳಿ-ಕಪ್ಪು ಮಿಶ್ರಿತ ತಲೆ ಕೂದಲು
    ಧರಿಸಿರುವ ಬಟ್ಟೆ: ಹಳದಿ ಹಾಗೂ ಕೆಂಪು ಬಣ್ಣದ ಸೀರೆ, ಹಸಿರು ಬಣ್ಣದ ರವಿಕೆ, ಕಿವಿಯಲ್ಲಿ ಬೆಂಡೋಲೆ
    ಮಾತಿನ ಭಾಷೆ: ಕನ್ನಡ
    ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: ಪಣಂಬೂರು ಪೊಲೀಸ್ ಠಾಣೆ: 0824-2220530, ಮೊಬೈಲ್ ಸಂಖ್ಯೆ: 9480805355, 9480805331, ಮಂಗಳೂರು ನಗರ ಕಂಟ್ರೋಲ್ ರೂಮ್: 0824-2220800ಈ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ, ಮೇಲ್ಕಂಡ ನಂಬರ್‌ಗಳಿಗೆ ತಕ್ಷಣವಾಗಿ ಸಂಪರ್ಕಿಸಿ, ಅವರ ಪತ್ತೆಗೆ ಸಹಕರಿಸಲು ಸಾರ್ವಜನಿಕರಿಂದ ಪಣಂಬೂರು ಪೊಲೀಸರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!