Saturday, June 6, 2026
Homeಕರಾವಳಿಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಆಚರಣೆ

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಆಚರಣೆ

- Advertisement -
- Advertisement -

ಬೆಳ್ತಂಗಡಿ: ಸವಣಾಲು ಹಿರಿಯ ಪ್ರಾಥಮಿಕ ವಿದ್ಯಾ ಸಂಸ್ಥೆಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನ ರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಬೆಳ್ತಂಗಡಿ ಕ್ಲಬ್ಬಿನ ಅಧ್ಯಕ್ಷರಾದ ಲ| ಮುರಳಿ ಬಲಿಪ ವಕೀಲರು ನೆರವೇರಿಸಿದರು.

ನಂತರ ಶ್ರೀ ರಂಗನಾಥ ರಾವ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ದಯಾನಂದ ರೈ, ಪದಾಧಿಕಾರಿಗಳಾದ ಶ್ರೀ ದಾಮೋದರ ಬಂಗೇರ, ಶ್ರೀ ಗೋಪಾಲ ಗೌಡ, ಶ್ರೀ ಕೃಷ್ಣಪ್ಪ ಗೌಡ, ಶ್ರೀ ವಿವೇಕ್ ಶೆಟ್ಟಿ ,ಶ್ರೀ ಸುಬ್ರಹ್ಮಣ್ಯ ಭಟ್, ಶ್ರೀ ಗಣೇಶ್ ಭಂಡಾರಿ, ಶ್ರೀ ಕೇಶವ ನಾಯ್ಕ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಲೋಕನಾಥ ಶೆಟ್ಟಿ, ಸದಸ್ಯರಾದ ಶ್ರೀ ಪ್ರಭಾಕರ ಆಚಾರ್ಯ, ಶ್ರೀಮತಿ ಪ್ರೇಮಾ, ಶ್ರೀ ರವಿಂದ್ರ ಶೆಟ್ಟಿ, ವಿದ್ಯಾರ್ಥಿ ನಾಯಕ ಧನ್ ರಾಜ್ ಹೆಗ್ಡೆ, ವೇದಿಕೆಯಲ್ಲಿದ್ದರು.

ವೇದಿಕೆಯ ಮುಂಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಅನೇಕ ಪೋಷಕರು, ವಿದ್ಯಾಭಿಮಾನಿಗಳು ಶಾಲೆಯ ಎಲ್ಲಾ ಗುರು ಮಾತೆಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.ಶ್ರೀ ಮಂಜುನಾಥ ಜಿ ಇವರು ಆಗಮಿಸಿದ ಸರ್ವರನ್ನು ಸ್ವಾಗತಿಸಿದರು, ಶ್ರೀಮತಿ ಮಮತಾ ,ಕುಮಾರಿ ಸುಷ್ಮಾ, ಮಕ್ಕಳ ಬಹುಮಾನ ಪಟ್ಟಿ ವಾಚಿಸಿದರು. ಶ್ರೀಮತಿ ಸೌಮ್ಯ ಧನ್ಯವಾದ ಸಮರ್ಪಿಸಿದರು. ಕುಮಾರಿ ಶುಭ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ವೈಶಾಲಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

- Advertisement -

Latest News

error: Content is protected !!