Thursday, June 25, 2026
Homeಕರಾವಳಿಮಂಗಳೂರುಬಂಟ್ವಾಳ; ಕೆಲರಾಯ್ ಶಿಕ್ಷಕ ವಿದ್ಯಾರ್ಥಿಗಳ ಆಟಿ ಸಹಮಿಲನ

ಬಂಟ್ವಾಳ; ಕೆಲರಾಯ್ ಶಿಕ್ಷಕ ವಿದ್ಯಾರ್ಥಿಗಳ ಆಟಿ ಸಹಮಿಲನ

- Advertisement -
- Advertisement -

ಬಂಟ್ವಾಳ; ಕೆಲರಾಯ್ ಸೈಂಟ್ ಜೋಕಿಂ ಹಾಗೂ ಅಮೃತ್‌ಲಾಲ್‌ಜೀ ಪ್ರೌಢಶಾಲೆಯ (೧೯೮೫-೯೫) ಸಾಲಿನ ವಿದ್ಯಾರ್ಥಿ ಹಾಗೂ ಶಿಕ್ಷಕರ ಆಟಿ ಸಹಮಿಲನ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ‘ಐಡಿಯಲ್ ಫಾರ್ಮ್ ಹೌಸ್’ ಇಲ್ಲಿ ನಡೆಯಿತು.

ಸುಂದರವಾದ ಪ್ರಕೃತಿಯ ಮಡಿಲಲ್ಲಿ ಶಿಕ್ಷಕ-ವಿದ್ಯಾರ್ಥಿಗಳು ಕಳೆದ ಆಟ-ಪಾಠಗಳ, ವಿನೋದಗಳ ಸವಿನೆನಪನ್ನು ಮೆಲುಕು ಹಾಕಿ ಸಂಭ್ರಮಪಟ್ಟರು. ಆಟಿ ತಿಂಗಳಿನ ವಿವಿಧ ತರಹದ ಖಾಧ್ಯಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಾವೇ ತಯಾರಿಸಿ ತಂದು ಸಹಭೋಜನ ಮಾಡಿದರು. ಅನೇಕರು ತಮ್ಮ ಮಧುರ ಕಂಠದಿಂದ ಹಾಡಿ ರಂಜಿಸಿದರು. ತೆಂಗು-ಕಂಗು, ಡ್ರ್ಯಾಗನ್ ಫ್ರೂಟ್, ವಿವಿಧ ಹಣ್ಣು-ಹಂಪಲುಗಳ ಪ್ರದರ್ಶನವನ್ನು ಐಡಿಯಲ್ ಫಾರ್ಮ್ ಹೌಸ್ ನ ಮಾಲೀಕರಾದ ರಾಜೇಶ್ ಅಮೀನ್ ಹಾಗೂ ಕುಟುಂಬ ಇದನ್ನು ಆಯೋಜಿಸಿದ್ದರು.

- Advertisement -

Latest News

error: Content is protected !!