- Advertisement -
![]()
- Advertisement -
ಬೆಳ್ತಂಗಡಿ : ಅಕ್ರಮ ಗಾಂಜಾ ದಾಸ್ತಾನು ಮತ್ತು ಮಾರಾಟ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರಿಂದ ಹಲವು ಸಮಯಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿಯಾದ ಮಹಮ್ಮದ್ ರಫೀಕ್ @ ಮದ್ದಡ್ಕ ರಫೀಕ್(39) ಎಂಬಾತನನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಪೊಲೀಸು ಆ.14 ರಂದು ಕಾರ್ಕಳದಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಮದಡ್ಕ ರಫೀಕ್ ವಿರುದ್ಧ ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆ, ವೇಣೂರು ಪೊಲೀಸ್ ಠಾಣೆ, ಚಿಕ್ಕಮಗಳೂರು CEN ಪೊಲೀಸ್ ಠಾಣೆ, ಬಣಕಲ್ ಪೊಲೀಸ್ ಠಾಣೆ, ದಕ ಜಿಲ್ಲಾ CEN ಪೊಲೀಸ್ ಠಾಣೆ, ಹಾಗೂ ಬಂಟ್ಟಾಳ ಅಬಕಾರಿ ಠಾಣೆ, ಬೆಳ್ತಂಗಡಿ ಅಬಕಾರಿ ಠಾಣೆಯಲ್ಲಿ ಗಾಂಜಾ ಪ್ರಕರಣಗಳು ದಾಖಲಾಗಿರುತ್ತದೆ.
- Advertisement -


