- Advertisement -


- Advertisement -
ಬಂಟ್ವಾಳ: ಇಲ್ಲಿನ ಕೆಲರಾಯ್ ಸೈಂಟ್ ಜೋಕಿಂ ಹಾಗೂ ಅಮೃತ್ಲಾಲ್ಜೀ ಪ್ರೌಢಶಾಲೆಯ (1985-95) ಸಾಲಿನ ವಿದ್ಯಾರ್ಥಿ ಹಾಗೂ ಶಿಕ್ಷಕರ ಆಟಿ ಸಹಮಿಲನ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ‘ಐಡಿಯಲ್ ಫಾರ್ಮ್ ಹೌಸ್’ 10.08.2025 ರಂದು ನಡೆಯಿತು.
ಸುಂದರವಾದ ಪ್ರಕೃತಿಯ ಮಡಿಲಲ್ಲಿ ಶಿಕ್ಷಕ-ವಿದ್ಯಾರ್ಥಿಗಳು ಕಳೆದ ಆಟ-ಪಾಠಗಳ, ವಿನೋದಗಳ ಸವಿನೆನಪನ್ನು ಮೆಲುಕು ಹಾಕಿ ಸಂಭ್ರಮಪಟ್ಟರು. ಆಟಿ ತಿಂಗಳಿನ ವಿವಿಧ ತರಹದ ಖಾಧ್ಯಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಾವೇ ತಯಾರಿಸಿ ತಂದು ಸಹಭೋಜನ ಮಾಡಿದರು. ಅನೇಕರು ತಮ್ಮ ಮಧುರ ಕಂಠದಿಂದ ಹಾಡಿ ರಂಜಿಸಿದರು. ತೆಂಗು-ಕಂಗು, ಡ್ರ್ಯಾಗನ್ ಫ್ರೂಟ್, ವಿವಿಧ ಹಣ್ಣು-ಹಂಪಲುಗಳ ಈ ಫಾರ್ಮ್ ಹೌಸಿನ ಮಾಲಿಕರಾದ ರಾಜೇಶ್ ಅಮೀನ್ ಹಾಗೂ ಕುಟುಂಬ ಇದನ್ನು ಆಯೋಜಿಸಿದ್ದರು.
- Advertisement -


