- Advertisement -


- Advertisement -
ಮೂಡುಬಿದಿರೆ: ನಗರದ ಮೊದಲನೇ ಮಾಲ್ ‘ಐಕೇರ್ ಸಿಟಿ ಮಾಲ್’ ಉದ್ಘಾಟನೆಗೆ ಅಣಿಯಾಗುತ್ತಿದೆ. ಎರಡು ಬೇಸ್ಮೆಂಟ್ ಪಾರ್ಕಿಂಗ್ ಸೇರಿ ಸುಮಾರು ಎಂಟು ಅಂತಸ್ತುಗಳಿರುವ ಈ ಮಾಲ್ ನಲ್ಲಿ 200 ರಿಂದ 1200 ಜನ ಸಾಮರ್ಥ್ಯವಿರುವ ಅತ್ಯಾಧುನಿಕ ಸೌಲಭ್ಯಗಳುಳ್ಳ ‘ಮೆಲಾಶ್ ಬ್ಯಾಂಕ್ವೆಟ್’ ಹೆಸರಿನ ಆಡಿಟೋರಿಯಂ ಈಗಾಗಲೇ ಕಾಯಾರಂಭ ಮಾಡಿದೆ.
90% ಮಾಲ್ ನ ಕೆಲಸ ಈಗಾಗಲೇ ಮುಗಿದಿದ್ದು ಕೆಲವೇ ತಿಂಗಳುಗಳಲ್ಲಿ ಕಾರ್ಯಾರಂಭ ಮಾಡಲಿದೆ. ಮೂಡುಬಿದಿರೆ ಪ್ರದೇಶದಲ್ಲಿ ಯಾವುದೇ ಥಿಯೇಟರುಗಳಿಲ್ಲದಿರುವುದರಿಂದ ಐಕೇರ್ ಸಿಟಿ ಮಾಲ್ ನಲ್ಲಿ ಎರಡು ಮಲ್ಟಿಫ್ಲೆಕ್ಸ್ ಥಿಯೇಟರ್ ಕೂಡ ಕಾರ್ಯಾರಂಭ ಮಾಡಲಿದ್ದು, ಮೂಡುಬಿದಿರೆಯ ಜನರಿಗೆ ಅನುಕೂಲವಾಗಲಿದೆ. ಫುಡ್ ಕೋರ್ಟ್, ಹೈಪರ್ಮಾರ್ಕೆಟ್ ಬ್ರಾಂಡೆಡ್ ಷೋರೂಮ್ ಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳು, ಬಾರ್ & ರೆಸ್ಟೋರೆಂಟ್ ಸೇರಿದಂತೆ ಪ್ರವಾಸಿಗರಿಗೆ ರೂಮ್ ಗಳು ಕೂಡಾ ಲಭ್ಯವಾಗಲಿವೆ.
- Advertisement -


