Wednesday, June 3, 2026
Homeತಾಜಾ ಸುದ್ದಿಎಡಪಂಥಿಯರಿಂದ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ;  ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪ

ಎಡಪಂಥಿಯರಿಂದ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ;  ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪ

- Advertisement -
- Advertisement -

ಶಿವಮೊಗ್ಗ : ಎಡಪಂಥಿಯರಿಂದ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು ಮಂಜುನಾಥ ದೇವಸ್ಥಾನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದರ ವಿರುದ್ಧ ಹಿಂದೂ ನಾಯಕರು, ಮಠಾಧೀಶರು ರಸ್ತೆಗಿಳಿದು ಹೋರಾಡುವ ಅಗತ್ಯವಿದೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಯಾವುದೇ ಧರ್ಮ ವಿರೋಧಿಗಳ ಯತ್ನ ಯಶಸ್ವಿಯಾಗುವುದಿಲ್ಲ. ಎಸ್ ಐಟಿ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ದೂರುದಾರ ಅನಾಮಿಕ ವ್ಯಕ್ತಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎನ್ನುತ್ತಿದ್ದಾನೆ. ಹಾಗಾದ್ರೆ ಅವನನ್ನು ಅರಣ್ಯಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಲು ಬಿಟ್ಟುವರು ಯಾರು? ಇದು ಅರಣ್ಯ ಕಾಯ್ದೆಯ ಉಲ್ಲಂಘನೆ ಅಲ್ವಾ?  ಆತನನ್ನು ತಕ್ಷಣ ಅರೆಸ್ಟ್ ಮಾಡಬೇಕು. ಅವನ ಹಿಂದೆ ಯಾರಿದ್ದಾರೆ ಅಂತಾ ತನಿಖೆ ಮಾಡ್ಬೇಕು. ವಿದೇಶ ಹಣ ಬಂದಿದೆಯಾ ಅಂತಾ ತನಿಖೆಯಾಗ್ಬೇಕು. SDPIಗೆ ಇಲ್ಲಿ ಏನ್ ಕೆಲಸ ಇದೆ? ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

- Advertisement -

Latest News

error: Content is protected !!