Thursday, June 4, 2026
Homeಕರಾವಳಿಬೆಳ್ತಂಗಡಿ: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಣಿಯೂರಿನ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಣಿಯೂರಿನ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ಬೆಳ್ತಂಗಡಿ: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಣಿಯೂರು(ರಿ) ಮತ್ತು ಸಾರ್ವಜನಿಕರ ವತಿಯಿಂದ ನಡೆಯುವ 46 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಜುಲೈ 29 ಮಂಗಳವಾರ ನಾಗರಪಂಚಮಿ ಯ ಶುಭದಿನದಂದು ಟ್ರಸ್ಟ್ ನ ಕಟ್ಟಡದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಗೌರವ ಸಲಹೆಗಾರರು ಟ್ರಸ್ಟಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಟ್ರಸ್ಟ್ ನ ಅದ್ಯಕ್ಷರಾದ ಯಶೋಧರ ಶೆಟ್ಟಿ ಕಣಿಯೂರು ನೆರೆದವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಸುಕೇಶ್ ಗೌಡ ಬರೆಮೇಲು ಎಲ್ಲರಲ್ಲೂ ಕಾರ್ಯಕ್ರಮ ಯಶಸ್ಸಿಗೆ ಸಹಕಾರ ಕೋರಿ ಧನ್ಯವಾದ ಸಮರ್ಪಿಸಿದರು.

ನೆರೆದವರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಟ್ರಸ್ಟ್ ನ ಸದಸ್ಯರು ಕೊಡುಗೈ ಧಾನಿ ಪದ್ಮನಾಭ ಶಿಲ್ಪಿ ಪಿಲಿಗೂಡು ಇವರು ನೀಡಿ ಸಹಕರಿಸಿದರು.

- Advertisement -

Latest News

error: Content is protected !!