Wednesday, June 3, 2026
Homeತಾಜಾ ಸುದ್ದಿಕೆಪಿಸಿಸಿ ಪ್ರಚಾರ ಸಮಿತಿಗೆ ಹೊಸ ಪದಾಧಿಕಾರಿಗಳ ನೇಮಕ

ಕೆಪಿಸಿಸಿ ಪ್ರಚಾರ ಸಮಿತಿಗೆ ಹೊಸ ಪದಾಧಿಕಾರಿಗಳ ನೇಮಕ

- Advertisement -
- Advertisement -

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹೊಸ ಪದಾಧಿಕಾರಿಗಳನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ.

ಈಗಾಗಲೇ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಹ ಅಧ್ಯಕ್ಷರಾಗಿ ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್‌. ಹನುಮಂತಯ್ಯ ನೇಮಕಗೊಂಡಿದ್ದಾರೆ.

ಇನ್ನು ಸಮಿತಿಗೆ ಮಾಜಿ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಹತ್ತು ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ‌ಹನ್ನೆರಡು ಮುಖ್ಯ ಸಂಯೋಜಕರ ಪೈಕಿ ಕೃಪಾ ಆಳ್ವ ಮತ್ತು ಕೆ.ಪಿ. ಜಾನಿ ಕಲ್ಲುಗುಂಡಿ ಸ್ಥಾನ ಪಡೆದಿದ್ದು, ಫಾರೂಕ್ ಉಳ್ಳಾಲ್, ಶಶಿಕಿರಣ್ ರೈ, ಚಂದ್ರಹಾಸ್ ಶೆಟ್ಟಿ, ಇಬ್ರಾಹಿಂ ಗೂನಡ್ಕ ಮತ್ತು ಪದ್ಮ ಪ್ರಸಾದ್ ಜೈನ್ ಸೇರಿದಂತೆ 42 ಮಂದಿಯನ್ನು ಸಂಯೋಜಕರಾಗಿ ನೇಮಕ ಮಾಡಲಾಗಿದೆ.

- Advertisement -

Latest News

error: Content is protected !!