- Advertisement -
![]()
- Advertisement -
ಪುತ್ತೂರು: ವಿವಾಹಿತ ಯುವಕನೊಬ್ಬ ಆರ್ಥಿಕ ಹಾಗೂ ವೈಯುಕ್ತಿಕ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಪುತ್ತೂರು ತಾಲ್ಲೂಕಿನ ಕಡಬದಲ್ಲಿ ನಡೆದಿದೆ.
ಮೃತಪಟ್ಟವರನ್ನು ಕಬಕ ನಿವಾಸಿ ವಿಶ್ವಾಸ್ ವಿ ಎನ್ನಲಾಗಿದೆ.
ಇವರು ಜು.28 ರಂದು ಮನೆಯ ಸಮೀಪವೇ ಇರುವಂತಹ ಅವರದ್ದೇ ವೆಲ್ಡಿಂಗ್ ಶಾಪ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಮೃತರ ಪತ್ನಿ ದಿವ್ಯಾ ಅವರು ಪುತ್ತೂರು ಠಾಣೆಗೆ ದೂರನ್ನು ನೀಡಿದ್ದಾರೆ. ದೂರಿನಂತೆ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
- Advertisement -


