- Advertisement -
![]()
- Advertisement -
ಪುತ್ತೂರು; ವಿವಾಹಿತ ಯುವಕ ನೇಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ನೆಹರೂ ನಗರದಲ್ಲಿ ನಡೆದಿದೆ.
ನೆಹರೂ ನಗರದ ಕಲ್ಲೇಗ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ ಮಾಲೀಕ ವಿಶ್ವಾಸ್ (37) ಮೃತ ಯುವಕ. ವಿಶ್ವಾಸ್ ಅವರು ಜುಲೈ 28ರಂದು ತನ್ನ ವೆಲ್ಡಿಂಗ್ ಶಾಪ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶ್ವಾಸ್ ಅವರ ಪತ್ನಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಅಂಗನವಾಡಿಯಿಂದ ತನ್ನ ಕೆಲಸ ಮುಗಿಸಿ ಮನೆಗೆ ಸಂಜೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಲ್ಲೇಗ ಗಣೇಶ್ ಬಾಗ್ ನಿವಾಸಿ ಆಗಿರುವ ಅವರು ಮನೆ ಸಮೀಪದಲ್ಲೇ ಉದ್ಯಮ ನಡೆಸುತ್ತಿದ್ದರು. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


