- Advertisement -
- Advertisement -
ಬಿಸಿರೋಡ್: ಇಲ್ಲಿನ ನವರತನ್ ಇಲೆಕ್ಟ್ರಿಕಲ್ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಯುವಕ ರಾಜಸ್ಥಾನ ಮೂಲದ ನಟವರ್ ಸಿಂಗ್ (27) ಎನ್ನಲಾಗಿದೆ.
ಈತನಿಗೆ ಆರು ತಿಂಗಳ ಹಿಂದೆ ಹೃದಯ ನೋವು ಕಂಡು ಬಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.
ಆತನಿಗೆ ಜುಲೈ9 ಬುಧವಾರದಂದು ರಾತ್ರಿ ಸುಮಾರು 7 ಗಂಟೆಯ ವೇಳೆಗೆ ತಲೆಸುತ್ತು ಬಂದಿದ್ದು, ಕೂಡಲೇ ಕುಟುಂಬಸ್ಥರು ಈತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಿದ್ದಾರೆ. ಆದರೆ ಈತ ಆಸ್ಪತ್ರೆಯ ಮೆಟ್ಟಿಲು ಹತ್ತುವ ವೇಳೆಗೆ ಬಿದದು ಅಸುನೀಗಿದ್ದಾನೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇನ್ನು ಈತ ಮೂಲತಃ ರಾಜಸ್ಥಾನದವನಾಗಿರುವುದರಿಂದ ಮೃತದೇಹವನ್ನು ವಿಮಾನದ ಮೂಲಕ ಅಲ್ಲಿಗೆ ಕೊಂಡುಹೋಗಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
- Advertisement -