- Advertisement -
- Advertisement -
ಸುಳ್ಯ: ಇಲ್ಲಿನ ಮಂಡೆಕೋಲು ಎಂಬಲ್ಲಿನ ಮಹಿಳೆಯೋರ್ವರು ವಿಪರೀತ ಜ್ವರದಿಂದ ಬಳಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಸುರೇಶ್ ಕಾಮತ್ ಎಂಬವರ ಪತ್ನಿ ಸುಭಾಷಿಣಿ ಅವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು.
ಸುಳ್ಯದ ಮಂಡೆಕೋಲು ಗ್ರಾಮದ ಶಶಿಧರ ನಾಯಕ್ ಹಾಗೂ ಪದ್ಮಾವತಿ ನಾಯಕ್ ದಂಪತಿಯ ಪುತ್ರಿಯಾಗಿರುವ ಇವರು ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತರು ತಾಯಿ, ಸಹೋದರ, ಸಹೋದರಿ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -