ಬೆಳ್ತಂಗಡಿ : ಇಲ್ಲಿನ ಸಾರ್ವಜನಿಕ ಹಿಂದೂ ರುದ್ರ ಭೂಮಿಯ ನಿರ್ವಹಣಾ ಸಮಿತಿ ರಚನೆಯ ಪೂರ್ವಭಾವಿ ಸಭೆಯು ಬೆಳ್ತಂಗಡಿಯ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಜುಲೈ 7 ಸೋಮವಾರದಂದು ಶಾಸಕ ಹರೀಶ್ ಪೂಂಜಾ ಹಾಗೂ ಪ.ಪಂ ಅಧ್ಯಕ್ಷ ಜಯಾನಂದ ಗೌಡ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಗೌರವ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಲಾಯಿಲದ ಶಶಿಧರ್ ಪ್ರೈ, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ್ ಪಟ ವರ್ಧನ್, ಕೋಶಾಧಿಕಾರಿಯಾಗಿ ಉದ್ಯಮಿ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಪದ್ಮ ಕುಮಾರ್ ವಿಶ್ವನಾಥ್ ಶೆಟ್ಟಿ, ಸಂತೋಷ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ದೀಪಕ್ ರಾಜ ಕೇಸರಿ, ಆಶಾ ಸತೀಶ್, ಸದಸ್ಯರಾಗಿ ಪಟ್ಟಣ ಪಂಚಾಯತ್ ಬೆಳ್ತಂಗಡಿ ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷ ಗೌರಿ, ಸ್ಮಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಲೋಕೇಶ್ ಅಂಬರೀಶ್ ಜನಾರ್ಧನ್ ಜಗದೀಶ್ ಡಿ, ರಜನಿ ಕುಡ, ರಾಜಶ್ರೀ ರಮಣ್, ಮುಸ್ತರ್ ಜಾನ್, ನಾಮನಿರ್ದೇಶರಾದ ಸತೀಶ್ ಶೆಟ್ಟಿ ಗುರುವಾಯನಕೆರೆ, ಹೆನ್ರಿ ಲೋಬೊ, ಡಾ. ರಮೇಶ್, ತುಕಾರಾಮ್. ಬಿ, ಸತೀಶ್ ರೈ, ಪ್ರಮೋದ್ ಆರ್ ನಾಯಕ್, ಭುಜಂಗ ಶೆಟ್ಟಿ, ನವೀನ್ ಕುಮಾರ್, ಗಣೇಶ್ ಪೈ, ರೊನಾಲ್ಡ್ ಲೋಬೊ, ಮಂಜುನಾಥ್ ರೈ, ಸತೀಶ್ ಕೆ, ರಾಘವೇಂದ್ರ ಕಿಣಿ, ಮಂಜುನಾಥ್, ಬಿಎಸ್ ಕುಲಾಲ್, ಪುಸಾದ್ ಆಯ್ಕೆಯಾದರು.