ಯುವ ರಾಜ್ ಕುಮಾರ್ ಅಭಿನಯದ ‘ಎಕ್ಕ’ ಚಿತ್ರದ ಬಿಡಗಡೆಗೆ ಈಗಾಗಲೇ ದಿನಗಣನೆ ಪ್ರಾರಂಭವಾಗಿದ್ದು, ಈ ಚಿತ್ರದ ಮೊದಲ ಹಾಡು ‘ಬ್ಯಾಂಗಲ್ ಬಂಗಾರಿ …’ ಸಖತ್ ಹಿಟ್ ಆಗಿದೆ. ಇದೀಗ ಇದರ ಬೆನ್ನಲೇ ಚಿತ್ರದ ಮತ್ತೊಂದು ಹಾಡು ʻ‘ರೌಡಿ ರೈಮ್ಸ್ …’ ಎಂಬ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‍ನಲ್ಲಿ ಅನಾವರಣ ಮಾಡಲಾಗಿದೆ.
ಇನ್ನು ಈ ಹಾಡಿನಲ್ಲಿ ರೌಡಿಗಳ ಚಿತ್ರವಿದ್ದು ಇದರಲ್ಲಿ A to Z ತನಕ ವಿಚಾರಗಳನ್ನು ಹೇಳಲಾಗಿದ್ದು, A ಅಕ್ಷರದಿಂದ Z ಅಕ್ಷರದವರೆಗೂ ರೌಡಿಗಳ ಮ್ಯಾಟರ್ ಅನ್ನು ಇಲ್ಲಿ ಭಿನ್ನವಾಗಿ ಹೇಳಲಾಗಿದೆ.
‘ರೌಡಿ ರೈಮ್ಸ್ …’ ಹಾಡಿಗೆ ನಾಗಾರ್ಜುನ್ ಶರ್ಮಾ ಹಾಗೂ ನಿರ್ದೇಶಕ ರೋಹಿತ್ ಪದಕಿ ಸಾಹಿತ್ಯ ಬರೆದಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಚರಣ್ ರಾಜ್ ಹಾಗೂ ರೋಹಿತ್ ಪದಕಿ ರೌಡಿ ರೈಮ್ಸ್ಗೆ ಧ್ವನಿಯಾಗಿದ್ದಾರೆ.
‘ಎಕ್ಕ’ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಸೇರಿ ಜಂಟಿಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆದಿತ್ಯ, ಅತುಲ್ ಕುಲಕರ್ಣಿ, ಸಂಜನಾ ಆನಂದ್, ಸಂಪದ ಹುಲಿವಾನ ಸೇರಿ ಇಬ್ಬರು ನಾಯಕಿಯರಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ.
ರಾಜ್ಯಾದ್ಯಂತ ಎಕ್ಕ ಸಿನಿಮಾವು ಜುಲೈ 18ರಂದು ಬಿಡುಗಡೆಯಾಗುತ್ತಿದೆ.