Monday, July 7, 2025
Homeಕರಾವಳಿಉಡುಪಿರಾಷ್ಟ್ರೀಯ ಹೆದ್ದಾರಿ 169-ಎಯ ದುಃಸ್ಥಿತಿ ಖಂಡಿಸಿ ಸಾರ್ವಜನಿಕರಿಂದ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ 169-ಎಯ ದುಃಸ್ಥಿತಿ ಖಂಡಿಸಿ ಸಾರ್ವಜನಿಕರಿಂದ ಪ್ರತಿಭಟನೆ

spot_img
- Advertisement -
- Advertisement -

ಉಡುಪಿ: ಇಲ್ಲಿನ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ 169-ಎ ರಸ್ತೆಯ ದುಃಸ್ಥಿತಿಯನ್ನು ಖಂಡಿಸಿ ಪರ್ಕಳದ ನಾರಾಯಣ ಗುರು ಮಂದಿರದ ಜಂಕ್ಷನ್ ಬಳಿ ಜುಲೈ 06 ಭಾನುವಾರದಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮನೋವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಡಾ. ಪಿ.ವಿ. ಭಂಡಾರಿ, “ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದು, ಈಗ ಮಳೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಅಷ್ಟೇಅಲ್ಲದೆ ವಾಹನ ಸಂಚಾರಕ್ಕೆ ರಸ್ತೆಗಳು ಕೂಡ ಯೋಗ್ಯವಾಗದೆ ಇರುವುದರಿಂದ ಅವುಗಳನ್ನು ಮತ್ತೆ ಸಂಚಾರಕ್ಕೆ ಯೋಗ್ಯವಾಗಿಸಲು ತಕ್ಷಣದ ಕ್ರಮದ ಅಗತ್ಯವಿದೆ ಎಂದು ಹದಗೆಟ್ಟ ರಸ್ತೆಯ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಮುದಾಯ ಮುಖಂಡರಾದ ಅಮೃತ್ ಶೆಣೈ, ಜೈವಿಠಲ್, ಅನ್ಸಾರ್ ಅಹ್ಮದ್, ರಮೇಶ್ ಕಾಂಚನ್, ಡಾ. ಸುಲತಾ ಭಂಡಾರಿ, ಮಂಜುನಾಥ ಉಪಾಧ್ಯಾಯ ಹಾಗೂ ವಿವಿಧ ಸ್ಥಳೀಯ ಸಂಘಟನೆಗಳ ಸದಸ್ಯರು ಮತ್ತು ಪರ್ಕಳ ಹಾಗೂ ಮಂಜುನಾಥ ನಗರದ ನಿವಾಸಿಗಳು ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!