- Advertisement -
- Advertisement -
ಸಾಸ್ತಾನ: ಆರೋಗ್ಯದಲ್ಲಿ ಏರುಪೇರು ಉಂಟಾಗಿ ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರು ಜು. ೦೪ ಶುಕ್ರವಾರದಂದು ಬ್ರಹ್ಮೈಕ್ಯರಾಗಿದ್ದಾರೆ.
ಅವರನ್ನು ಅನಾರೋಗ್ಯದ ನಿಮಿತವಾಗಿ ಶುಕ್ರವಾರದಂದು ಬೆಳಗ್ಗೆ ಡಯಾಲಿಸಿಸ್ ಗೆಂದು ಕರೆದುಕೊಂಡು ಹೋಗುವಾಗ ಬ್ರಹ್ಮಾವರ ಸಮೀಪ ಆರೋಗ್ಯದಲ್ಲಿ ಏರಪೇರಾಗಿದ್ದು, ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತದರೂ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಬಾಳೆಕುಂದ್ರು ಮಠದಲ್ಲಿ ಮಾಡಲಾಗಿದೆ. ಸಂಜೆ ನಾಲ್ಕು ಗಂಟೆ ಬಳಿಕ ಕಿರಿಯ ಶ್ರೀಗಳ ಮೂಲಕ ಶ್ರೀಗಳ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.
- Advertisement -