ಬೆಳ್ತಂಗಡಿ: ಇನ್‌ಸ್ಟಾಗ್ರಾಮ್ ರೀಲ್ಸ್ ಇತ್ತಿಚೀನ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಟ್ರೆಂಡಿಂಗ್ ಹಾಡುಗಳಿಗೆ ಲಿಂಪ್ ಸಿಂಕ್, ನೃತ್ಯ ಮಾಡಿ, ಹಾವಭಾವ ಸೇರಿಸಿ ರೀಲ್ಸ್ ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದು ಪ್ರಸಿದ್ದರಾಗಿದ್ದಾರೆ. ಹಳ್ಳಿಯಿಂದ-ದಿಲ್ಲಿಯವರೆಗೂ ಫೇಮಸ್ ಆದವರು ಇದ್ದಾರೆ. ರೀಲ್ಸ್ ವಿಡಿಯೋಗಳಿಂದ ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು ಸಾಲಿನಲ್ಲಿ ನಾರಾವಿಯ ಕೃಷ್ಣಪ್ರಿಯಾ ಭಟ್ ಸೇರ್ಪಡೆಯಾಗಿದ್ದಾರೆ.

ಈಕೆ ರೀಲ್ಸ್ ತಾರೆ, ಮೈಕ್ ಹಿಡಿದರೆ ಗಾನ ಕೋಗಿಲೆ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿದರೆ ನಲಿಯುತ್ತದೆ ಗಂಧರ್ವ ಲೋಕ, ಕ್ಯಾಮಾರಕ್ಕೆ ಫೋಸ್ ನೀಡುವ ಈ ಚೆಲುವೆ ಇದೀಗ ಸೀರಿಯಲ್ ಬೆಡಗಿ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಗೋಕುಲ ಧಾರಾವಾಹಿಯಲ್ಲಿ ನಂದನ ಕಿರಿಯ ಮಗಳಾದ ರಕ್ಷಾ ಪಾತ್ರಧಾರಿ ಕೃಷ್ಣಪ್ರಿಯಾ ಭಟ್ ಮೂಲತಃ ಬೆಳ್ತಂಗಡಿ ತಾಲೂಕಿನ ನಾರಾವಿಯವರು. ಪುರೋಹಿತ ಜಯರಾಮ ಭಟ್ ಮತ್ತು ವಿದ್ಯಾವತಿ ದಂಪತಿಗಳ ಹಿರಿಯ ಪುತ್ರಿ ಕೃಷ್ಣಪ್ರಿಯಾ ಭಟ್.
ರೀಲ್ಸ್ ಮಾಡಿ ಯಡವಟ್ಟು ಮಾಡಿಕೊಂಡವರನ್ನು ಎಷ್ಟೋ ಮಂದಿಯನ್ನು ನೋಡಿದ್ದೇವೆ. ಆದರೆ ರೀಲ್ಸ್ ಮಾಡುವುದೇ ಇತ್ತಿಚೀನ ದಿನಗಳಲ್ಲಿ ಕೆಲವರಿಗೆ ಹವ್ಯಾಸ ಹಾಗೂ ರೂಢಿಯಾಗಿದೆ. ಕೃಷ್ಣಪ್ರಿಯಾ ಭಟ್ ರೀಲ್ಸ್ ಮಾಡುವ ಹವ್ಯಾಸ ಹೊಂದಿದ್ದರು. ಆ ಹವ್ಯಾಸ ಇಂದು ಅವರನ್ನು ಕಿರುತೆರೆಗೆ ಪರಿಚಯಿಸಿದೆ. ಅವರ ರೀಲ್ಸ್ಗಳನ್ನು ನೋಡಿದ ಕಲರ್ಸ್ ಕನ್ನಡ ವಾಹಿನಿಯಿಯ ಬಣ್ಣದ ಟಾಕೀಸ್ ಪ್ರೋಡಕ್ಷನ್‌ನಿಂದ ನೇರವಾಗಿ ಅವರಿಗೆ ಕರೆ ಬಂದು, ಮೊಬೈಲ್ ಮೂಲಕ ಅಡೀಷನ್ ಮಾಡಿ ಅದರಲ್ಲಿ ಆಯ್ಕೆಯಾಗಿ ನಂದಗೋಕಲು ತಂಡಕ್ಕೆ ಹಾಗೂ ಕಿರುತೆರೆಗೆ ಪಾದರ್ಪಣೆ ಮಾಡಿದರು.
ನಂದಗೋಕುಲ ಪ್ರತಿಯೊಬ್ಬ ಅಪ್ಪನ ಕಥೆ:
ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕಥೆಯನ್ನು ಹೇಳುವ ಧಾರಾವಾಹಿ ‘ನಂದಗೋಕುಲ’ ಜೂನ್ ೪, ಬುಧವಾರದಿಂದ ರಾತ್ರಿ ೯ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರವಂತ್ ರಾಧಿಕಾ ನಿರ್ದೇಶನದ ‘ನಂದಗೋಕುಲ’ ಸೀರಿಯಲ್ ಪ್ರಸಾರವಾಗುತ್ತಿದೆ. ನಂದಕುಮಾರ್ ಒಬ್ಬ ಅನಾಥ. ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸ ತುಂಬಿದ ಛಲಗಾರ. 25 ವರ್ಷಗಳ ಹಿಂದೆ ಸೂರ್ಯಕಾಂತ್ – ಚಂದ್ರಕಾಂತ್ ಸಹೋದರರ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಸಹೋದರರ ಏಕೈಕ ತಂಗಿ ಗಿರಿಜಾಳನ್ನು ಪ್ರೀತಿಸಿ ಅವರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗುತ್ತಾನೆ. ಸಹೋದರರಿಗೆ ತಮ್ಮ ಅಂತಸ್ತಿನವನಲ್ಲ ಅನ್ನಿಸಿ ನಂದಕುಮಾರ್ – ಗಿರಿಜಾರನ್ನ ಹೊರಹಾಕುತ್ತಾರೆ. ನಂದಕುಮಾರ್ ಅವರ ಅಂತಸ್ತಿಗೆ ತಕ್ಕಂತೆ ಬೆಳೆಯುವ ಹಟದಿಂದ ‘ಗಿರಿಜಾ ಸ್ಟೋರ್ಸ್’ ಎಂಬ ದಿನಸಿ ಅಂಗಡಿಯನ್ನು ತೆರೆದು ಯಶಸ್ವಿಯಾಗುತ್ತಾನೆ. ಸಹೋದರರರಿಗೆ ಸವಾಲಾಗುವಂತೆ ಅವರ ಮನೆ ಎದುರೇ ‘ನಂದ ಗೋಕುಲ’ವನ್ನು ಕಟ್ಟುತ್ತಾನೆ.

ನಂದನ ಕಿರಿಮಗಳು ರಕ್ಷಾ:
ನಂದಕುಮಾರ್ ಮತ್ತು ಗಿರಿಜಾಗೆ ಐವರು ಮಕ್ಕಳು – ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ರಕ್ಷಾ. ತಂದೆಯ ಕಟ್ಟುನಿಟ್ಟಾದ ನಿರೀಕ್ಷೆಗಳ ನಡುವೆ ಐವರು ಬೆಳೆದಿದ್ದಾರೆ. ತಾನು ಪ್ರೀತಿಸಿ ಮದುವೆಯಾಗಿದ್ದರಿಂದ ತನಗೂ ತನ್ನ ಹೆಂಡತಿಗೂ ಕುಟುಂಬವೇ ಇಲ್ಲದಂತಾಯ್ತು. ತಮ್ಮಂತೆ ಮಕ್ಕಳಿಗೆ ಕಷ್ಟದ ಸ್ಥಿತಿ ಬರಕೂಡದು. ಅವರು ಕೂಡು ಕುಟುಂಬದಲ್ಲಿ ಸುಖವಾಗಿ ಇರಬೇಕು ಎಂಬ ಆಸೆಯಿಂದ ‘ನೀವ್ಯಾರೂ ಪ್ರೀತಿಸಿ ಮದ್ವೆ ಆಗೊಲ್ಲ ಅಂತ ನನಗೆ ಮಾತು ಕೊಡಿ!’ ಎಂದು ಮಕ್ಕಳಿಂದ ಭಾಷೆ ತೆಗೆದುಕೊಂಡಿರುತ್ತಾನೆ ನಂದಕುಮಾರ್.
ರಕ್ಷಾ ಪಾತ್ರಧಾರಿ ಕೃಷ್ಣಪ್ರಿಯಾ:
ನಂದಕುಮಾರ್‌ನ ಮುದ್ದಿನ ಮಗಳು ರಕ್ಷಾ. ಕೆಲವೊಂದು ವಿಚಾರದಲ್ಲಿ ನಂದನನ್ನು ಮನೆಯವರು ಒಪ್ಪಿಸುವುದಕ್ಕಿಂತ ರಕ್ಷಾ ಹೇಳಿದರೆ ಸೈ. ಮುದ್ದು ಪೆದ್ದು ಹುಡುಗಿ, ಅಪ್ಪನ ಮುಂದೆ ಇನ್ನೋಸೆಂಟ್ ರೀತಿ ಇರುವ ರಕ್ಷಾ ಇನ್ನೋಸೆಂಟ್ ಅಲ್ಲ, ಮಾತು ಜಾಸ್ತಿ ಆದರೆ ಅಪ್ಪನನ್ನು ಮಣ್ಣಿಸುವುದರಲ್ಲಿ ಎತ್ತಿದ ಕೈ. ಕಾಲೇಜಿನಲ್ಲಿ ಟಾಪರ್ ಆಗಿರುವ ರಕ್ಷಾ ಅಣ್ಣದಿಂರ ಮುದ್ದಿನ ತಂಗಿ, ಕೊನೆಯ ಅಣ್ಣ ವಲ್ಲಭನೊಂದಿಗೆ ಕಿತ್ತಾಟ ಮಾಡುವ ರಕ್ಷಾನ ಉಸಬರಿಯನ್ನು ಪರದೆ ಮೇಲೆ ಕಾಣಬಹುದು. ರಕ್ಷಾ ಅಂದರೆ ಕೃಷ್ಣಪ್ರಿಯಾ ಭಟ್‌ರ ಈ ನಟನೆಯನ್ನು ಜನರು ಅಪ್ಪಿಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಯಂ ಅಭಿವ್ಯಕ್ತಗೊಂಡ ಪ್ರತಿಭೆ:
ಕೃಷ್ಣಪ್ರಿಯಾ ಭಟ್ ಅವರ ತಾಯಿ ವಿದ್ಯಾವತಿ ಅವರು ಸಂಗೀತಭ್ಯಾಸ ನಡೆಸುತ್ತಿದ್ದಾಗ ಗರ್ಭಣಿಯಾಗಿದ್ದರು. ಅವರು ನಡೆಸುತ್ತಿದ್ದ ಸಂಗೀತಾ ಅಭ್ಯಾಸಗಳು ನನಗೆ ಕಲೆಯಾಗಿ ರಕ್ತಗತವಾಗಿ ಬಂದಿದೆ ಎಂದು ಕೃಷ್ಣಪ್ರಿಯಾ ಹೇಳಿಕೊಂಡಿದ್ದಾರೆ. ಮೈಕ್ ಹಿಡಿದರೆ ಗಾನ ಕೋಗಿಲೆಯಂತೆ ಸಂಗೀತಾ ತಾನಗಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈಕೆ ಭರತನಾಟ್ಯ, ನೃತ್ಯ ಕಲಾವಿದೆ. ಎಳೆಯ ವಯಸ್ಸಿನಿಂದ ನಟನೆ ಮಾಡಬೇಕು ಎನ್ನುವ ಕನಸು ಇತ್ತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ವ್ಯಕ್ತಿತ್ವ ಸ್ಪೂರ್ತಿ ಎಂದಿದ್ದಾರೆ ಕೃಷ್ಣಪ್ರಿಯಾ ಭಟ್. ಅವರು ಅಭಿನಯವನ್ನು ಯಾರಿಂದಲು ಕಲಿಯದೆ ರೀಲ್ಸ್ ಮೂಲಕ ಖ್ಯಾತಿ ಹೊಂದಿದ್ದರು. ಕಾಲೇಜು ದಿನಗಳಲ್ಲಿ ಕಲಾ ರಂಗದಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
ಮಂಗಳೂರು-ಧರ್ಮಸ್ಥಳ ನಡುವೆ ನಮ್ಮ ಊರು:
ಮಂಗಳೂರು ಮತ್ತು ಧರ್ಮಸ್ಥಳ ನಡುವಲ್ಲಿ ನಾರಾವಿ ಅಂತ ಸಂದರ್ಶನವೊಂದರಲ್ಲಿ ಆ್ಯಂಕರ್ ಪ್ರಶ್ನೆಗೆ ಕೃಷ್ಣಪ್ರಿಯಾ ಉತ್ತರಿಸಿದ್ದರು. ಈ ಹೇಳಿಕೆಗೆ ಅವರನ್ನು ಕಾಮೆಂಟ್ಸ್ನಲ್ಲಿ ಹೆಚ್ಚಿನವರು ಕಾಲು ಎಳೆದಿದ್ದರು. ಈ ಉತ್ತರದ ಮೂಲಕ ಹಲವಾರು ಮಂದಿಗೆ ಈಕೆ ನಾರಾವಿಯವಳು ಎಂದು ಪರಿಚಿತವಾಗಿತ್ತು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಮ್ಮ ಬೆಳ್ತಂಗಡಿ ತಾಲೂಕುವಿದ್ದು ಸೌಂದರ್ಯ ರಮಣೀಯ ಪ್ರಕೃತಿಯ ಮಡಿಲಿನಲ್ಲಿ ನಾರಾವಿ ಇದೆ. ಧರ್ಮಸ್ಥಳ ಸಹಿತ ಹಲವು ಪ್ರಸಿದ್ಧ ಊರುಗಳು ನಮ್ಮ ತಾಲೂಕಿನಲ್ಲಿರುವುದು ಹೆಮ್ಮಯ ವಿಚಾರ. ಮಂಗಳೂರು-ಧರ್ಮಸ್ಥಳ ಎಲ್ಲರಿಗೂ ಪರಿಚಿತ ಇದರ ನಡುವೆ ನಮ್ಮ ಊರು ನಾರಾವಿ ಎಂಬುವುದು ಎಲ್ಲರಿಗೂ ಗೊತ್ತಾಗಬೇಕು ಎಂದು ಕೃಷ್ಣಪ್ರಿಯಾ ಭಟ್ ತಿಳಿಸಿದ್ದು ನೆಟ್ಟಿಗರ ಚರ್ಚೆಗೆ ತೆರೆ ಎಳೆದಿದ್ದಾರೆ.
ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ ಕೃಷ್ಣಪ್ರಿಯಾ:
ನಿನ್ನ ಕಥೆಯಾಗಿಸೋ, ನನ್ನ ಬಿಟ್ಟುಹೋಗಬೇಡ ಆಲ್ಬಮ್ ಸಾಂಗ್‌ನಲ್ಲಿ ಅಭಿನಯಿಸಿರುವ ಕೃಷ್ಣಪ್ರಿಯಾ, ಆಪರೇಷನ್ ಅಲಮೇಲಮ್ಮ ಚಲನಚಿತ್ರ ಖ್ಯಾತಿಯ ನಿರ್ದೇಶಕ ರಿಷಿಯವರ “ಮಂಗಳಾಪುರಂ” ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಕರವಾಳಿಯ ಸವರ್ಣ ಮಳಿಗೆ ಹಾಗೂ ವಾಹನ್ ಶೋರೂಮ್‌ಗೆ ಆ್ಯಡ್ ಶೂಟ್ ಮಾಡಿ ಫೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಮೊದಲ ಸಿನಿಮಾ ಮಂಗಳಾಪುರಂ ಮುಂಬರುವ ದಿನಗಳಲ್ಲಿ ಶೂಟಿಂಗ್ ನಡೆಯಲಿದೆ. ಸೀರಿಯಲ್ ಪ್ರಾರಂಭವಾಗಿ ಮೊದಲ ಬಾರಿಗೆ ಊರಿಗೆ ಬಂದ ಕೃಷ್ಣಪ್ರಿಯಾರಿಗೆ ಮೆಚ್ಚಗೆ ಮಾತುಗಳು ದೊರತಿದೆ. ಜನರು ರಕ್ಷಾ ಎಂದು ಕರೆದು ನಿಲ್ಲಿಸಿ ಮಾತನಾಡುತ್ತಾರೆ, ಸೀರಿಯಲ್ ಬಗ್ಗೆ ಉತ್ತಮ ಪ್ರತಿಕ್ರಿಯೆಯಿದ್ದು ಜನರು ಪ್ರೋತ್ಸಾಹಿಸುತ್ತಿದ್ದಾರೆ ಎನ್ನುತ್ತಾರೆ ಅವರು.

ಪ್ರೇಕ್ಷಕರ ಪ್ರೀತಿಗಳಿಸುತ್ತಿರುವ ರಕ್ಷಾ:
ನಂದಗೋಕುಲ ಧಾರವಾಹಿ ಒಂದು ತಿಂಗಳಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾಸರವಾಗುತ್ತಿದ್ದು ಜನಮನಗಳಿಸುತ್ತಿದೆ. ನಂದನ ಮಗಳಾಗಿ ಕಾಣಿಸಿಕೊಂಡಿರುವ ಕೃಷ್ಣಪ್ರಿಯಾ ಭಟ್ ಪ್ರಥಮ ಬಾರಿಗೆ ಕಿರುತೆರೆಯಲ್ಲಿ ಬಣ್ಣಹಚ್ಚಿ ಪ್ರೇಕ್ಷಕರ ಪ್ರೀತಿಗಳಿಸುತ್ತಿದ್ದಾರೆ. “ಇದೀಗ ಹವಮಾನ ವರದಿ ಅಪ್ಪನ ಬೈಗುಳಕ್ಕೆ ವಲ್ಲಭ ಕುಮಾರ್ ಅವರ ಜೀವನ ಅಸ್ತವ್ಯಸ್ತ” ಎನ್ನುವ ರಕ್ಷಾರ ಮಾತು ಸೀರಿಯಲ್‌ನಲ್ಲಿ ಫೇಮಸ್ಸು. ಈಕೆ ನಮ್ಮೂರಿನ ಹೆಮ್ಮೆಯ ಪ್ರತಿಭೆಯಾಗಿದ್ದಾರೆ. ಹೊಸ್ಮಾರು, ಗುರುಕೃಪಾ ಶಾಲೆಯಲ್ಲಿ ಪ್ರಾಥರ್ಮಿಕ ಹಾಗೂ ಪ್ರೌಡ ಶಿಕ್ಷಣವನ್ನು ಪೂರೈಸಿ, ಬಜಗೋಳಿ ಸರಕಾರಿ ಶಾಲೆಯಲ್ಲಿ ಪಿಯುಸಿ ಹಾಗೂ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪದವಿ ಪಡೆದ ಇವರು ಮುಂದೆ ಪುತ್ತೂರಿನ ಫಿಲೋಮಿನದಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುವ ಇಚ್ಛೆಯಿದೆ ಎಂದು ಕೃಷ್ಣಪ್ರಿಯಾ ತಿಳಿಸಿದ್ದಾರೆ. ನಾರಾವಿಯ ಶ್ರೀಮಾತ ನಿಲಯದಲ್ಲಿ ತಂದೆ-ತಾಯಿ, ತಮ್ಮ ಅನಂತಕೃಷ್ಣ ಹಾಗೂ ತಂಗಿ ಮಂಜರಿಯೊಂದಿಗೆ ನೆಲೆಸಿದ್ದಾರೆ.
2025 ರ್ಟನಿಂಗ್ ಪಾಯಿಂಟ್
ರೀಲ್ಸ್ ಮಾಡುವ ಹವ್ಯಾಸ ರೂಡಿಸಿಕೊಂಡಿದ್ದೆ, ಆ ರೀಲ್ಸ್ಗಳೆ ಇಂದು ಸೀರಿಯಲ್‌ಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ. ಊರಿನಲ್ಲಿ ಅನೇಕ ಮಂದಿ ಗುರುತಿಸಿ ಪ್ರಶಂನೀಯ ನುಡಿಗಳ್ನಾಡಿ ಪ್ರೋತ್ಸಾಹಿಸುತ್ತಿದ್ದಾರೆ. 2025ನೇ ವರ್ಷ ನನ್ನ ಬದುಕಿಗೆ ಹೊಸ ತಿರುವು ನೀಡಿದೆ. ವಿದ್ಯಾಭ್ಯಾಸ, ವೃತ್ತಿ ಜೀವನಕ್ಕೆ ಹೊಸ ದಾರಿ ನೀಡಿದ್ದು 2025 ಬದುಕಿನ ರ್ಟನಿಂಗ್ ಪಾಯಿಂಟ್ ಆಗಿದೆ ಎಂದು ಕೃಷ್ಣಪ್ರಿಯಾ ಭಟ್ ನಾರಾವಿ ಹೇಳುತ್ತಾರೆ.

ಮಗಳು ಸೀರಿಯಲ್ ನಲ್ಲಿರುವುದು ಸಂತಸ
ಮಗಳು ಸೀರಿಯಲ್‌ನಲ್ಲಿ ಅಭಿನಯಿಸುತ್ತಿರುವುದು ಖುಷಿಯಿದೆ. ಉತ್ತಮವಾಗಿ ನಟಿಸುತ್ತಿದ್ದಾಳೆ. ಅವಳ ಕೇರಿಯರ್‌ಗೆ ನಮ್ಮ ಸರ್ಪೋಟ್ ಇದೆ. ಮೊದಲು ವಿದ್ಯಾವತಿಯ ಮಗಳು ಕೃಷ್ಣಪ್ರಿಯಾ ಎನ್ನುತ್ತಿದ್ದ ಜನರು ಈಗ ಕೃಷ್ಣಪ್ರಿಯಾನ ಅಮ್ಮಾ ಅಂತಿದ್ದಾರೆ. ಅಕ್ಕ ರೀಲ್ಸ್ ಮಾಡಿದರೆ ತಮ್ಮ ಶೂಟಿಂಗ್ ಮಾಡುತ್ತಿದ್ದ, ಒಟ್ಟಿನಲ್ಲಿ ಮಗಳು ಜನರ ಪ್ರೀತಿ ವಿಶ್ವಾಸ ಗಳಿಸುತ್ತಿರುವುದು ಸಂತಸ ತಂದಿದೆ ಎಂದು ತಾಯಿ ವಿದ್ಯಾವತಿ ಹೇಳುತ್ತಾರೆ.