Thursday, July 3, 2025
Homeಕರಾವಳಿಮಂಗಳೂರು ಪುತ್ತೂರು; ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣ: ಸಂತ್ರಸ್ಥೆಗೆ ನ್ಯಾಯಕ್ಕಾಗಿ ಎಸ್ ಡಿಪಿಐ ಸಂಘಟನೆಯಿಂದ ಪ್ರತಿಭಟನೆ

 ಪುತ್ತೂರು; ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣ: ಸಂತ್ರಸ್ಥೆಗೆ ನ್ಯಾಯಕ್ಕಾಗಿ ಎಸ್ ಡಿಪಿಐ ಸಂಘಟನೆಯಿಂದ ಪ್ರತಿಭಟನೆ

spot_img
- Advertisement -
- Advertisement -

 ಪುತ್ತೂರು; ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ಥೆಗೆ ನ್ಯಾಯಕ್ಕಾಗಿ ಆಗ್ರಹಿಸಿ  ಎಸ್ ಡಿಪಿಐ ಸಂಘಟನೆಯಿಂದ ಪುತ್ತೂರು ನಗರಸಭೆ ಎದುರು ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಸಂತ್ರಸ್ತೆ ತಾಯಿ ನಾನು ಎಲ್ಲಾ ಸಮುದಾಯದ ಬಳಿಗೂ ಹೋಗಿದ್ದೇನೆ. ಎಲ್ಲರೂ ಮಗುವನ್ನು ತೆಗೆಸಿ ಎಂದು ಹೇಳಿದ್ದಾರೆ .ಹೊರತು ಮದುವೆ ಮಾಡಿ ಕೊಡಬೇಕೆಂದು ಯಾರು ಹೇಳಿಲ್ಲ. ಹುಡುಗನ ಅಪ್ಪನಲ್ಲಿ ಮಾತನಾಡಿದಾಗ ಅವರು ನಿಮ್ಮ ಮಗು ಬೇರೆ ಅಲ್ಲ ನನ್ನ ಮಗು ಬೇರೆ ಅಲ್ಲ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದರು. ಇದೀಗ ಹುಡುಗನನ್ನು ಅವರ ಅಪ್ಪನೇ ಅಡಗಿಸಿಟ್ಡಿದ್ದಾರೆ. ನನಗೆ ನ್ಯಾಯ ಸಿಗದಾಗ ನಾನು ನನ್ನ ಮಗುವಿಗೆ ನ್ಯಾಯಕ್ಕಾಗಿ ಬೇಕಾದ ಸಂಘಟನೆಯಲ್ಲಿ ಕೇಳಿಕೊಂಡಿದ್ದೇನೆ. ನನ್ನ ಮಗಳ ಮಗುವಿಗೆ ತಂದೆಯ ಸ್ಥಾನ ಕೊಡಿಸಿ, ಹುಡಗನೊಂದಿಗೆ ರಿಜಿಸ್ಟ್ರರ್ ಮದುವೆ ಆಗಬೇಕು ಎಂದು ಹೇಳಿದರು.

ಈ ವೇಳೆ ಮಾತನಾಡಿದ ಎಸ್‍ಡಿಪಿಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮನೀಶ್ ಅಲಿ ರಾಜಕೀಯಕ್ಕಾಗಿ ಹಿಂದುಗಳ ಮನಸ್ಸಿನಲ್ಲಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿರುವ ಸಂಘ ಪರಿವಾರದ ಹಿಂದು ನಾವೆಲ್ಲ ಒಂದು ಎಂಬ ಸ್ಲೋಗನ್ ವೇದಿಕೆಯ ರಾಜಕೀಯಕ್ಕೆ ಸೀಮಿತವಾಗಿದೆ. ಓರ್ವ ತಾಯಿಗೆ ನ್ಯಾಯ ನೀಡಲು ಸಾಧ್ಯವಾಗದ ಈ ಮುಖಂಡರ ಅಸಲಿಯತು ಈಗ ಗೊತ್ತಾಗಿದೆ. ಇವರಿಂದ ಇಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿಲ್ಲ ಬದಲಿಗೆ ಜಾತಿ ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಹಿಂದು ಮುಖಂಡ ಎನ್ನವ ಪ್ರಭಾಕರ ಭಟ್ ಮಂಡ್ಯಕ್ಕೆ ಸಂತ್ರಸ್ತೆಯ ಪರವಾಗಿ ಭಾಷಣ ಮಾಡಲು ಹೋಗುತ್ತಾರೆ. ಆದರೆ ಅವರಿಗೆ ತನ್ನ ಊರಲ್ಲೆ ನಡೆದ ಘಟನೆಯ ಬಗ್ಗೆ ಖಂಡನೆ ನೀಡಲು ಅಗುವುದಿಲ್ಲ. ಹಿಂದುತ್ವವಾದಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇವತ್ತು ಯಾವ ಮಂಚದ ಅಡಿಯಲ್ಲಿ ಮಲಗಿದ್ದಾರೆ? ಇದೇ ಊರಿನ ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ.? ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸಂಜೀವ ಮಠಂದೂರು ಅವರು ಯಾಕೆ ಸಂತ್ರೆಸ್ತೆಯ ಬೆನ್ನಿಗೆ ನಿಂತಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿತ್ತಿಲ್ಲ, ಘಟನೆ ನಡೆದ ಮನೆಗೆ ಪರಿಶೀಲನೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದರು.

ಎಸ್ ಡಿ ಪಿ ಐ ಜಿಲ್ಲಾ ಸದಸ್ಯೆ ಝೀನತ್ ಬಂಟ್ವಾಳ ಅವರು ಮಾತನಾಡಿ ವಿಚಿತ್ರವಾದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಭಾರತದ ಪ್ರಜೆ ಎಂದು ಹೇಳಿ ಅನ್ಯಾಯದ ವಿಷಯ ಬಂದಾಗ ಒಂದು ವರ್ಗವನ್ನು ಧರ್ಮವನ್ನು ಗುರಿಯಾಗಿಸಿ ನ್ಯಾಯ ಕೊಡುವುದು. ಅತ್ಯಾಚಾರ ಎಸಗಿದವನು ಮೇಲ್ವರ್ಗ, ಬಿಜೆಪಿ ಮುಖಂಡನಾಗಿದ್ದರೆ ಅಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವುದಿಲ್ಲ. ಅದೇ ಯಾವುದೋ ಅಬ್ದುಲ್ಲ, ಜೋಸಪ್ ಆಗಿದ್ದಾರೆ. ಶೋಭಕ್ಕ ಬೆಂಕಿ ಹಚ್ಚುತ್ತಿದ್ದರು. ಇವತ್ತು ಅವರ ಪತ್ತೆ ಇಲ್ಲ ಎಂದರು.

- Advertisement -
spot_img

Latest News

error: Content is protected !!