- Advertisement -
- Advertisement -
ಮಂಗಳೂರಿನ ಹೊರವಲಯದ ಮದ್ಯ ಎಂಬಲ್ಲಿ ಎರಡು ಬಸ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಅಪಘಾತದ ಭೀಕರ ದೃಶ್ಯದ ವೀಡಿಯೋ ವೈರಲ್ ಆಗಿದೆ.
ಸುರತ್ಕಲ್‌ನ ಮದ್ಯ ಎಂಬಲ್ಲಿನ ವಾಲ್ಮೀಕಿ ಶಾಲೆಯ ಬಳಿ ಎರಡು ಖಾಸಗಿ ಬಸ್‌ಗಳ ನಡುವೆ ಈ ಡಿಕ್ಕಿ ನಡೆದಿದೆ. ಸಣ್ಣ ತಿರುವಿನಲ್ಲಿ ಆಗಮಿಸಿದ ಬಸ್ ಏಕಾಏಕಿ ಮುಂಭಾಗದಲ್ಲಿ ಬಂದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ.
ಅಪಘಾತದ ಭೀಕರ ದೃಶ್ಯ ಬಸ್ಸೊಂದರ ಮುಂಭಾಗದ ಡ್ಯಾಶ್ ಬೋರ್ಡ್‌ನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದ್ದು ಅಪಘಾತದ ವಿಡಿಯೋ ನೋಡುವಾಗ ಮೈ ಜುಮ್ಮೆನ್ನುವಂತಿದೆ.
- Advertisement -