Friday, June 5, 2026
Homeಕರಾವಳಿಸುಳ್ಯ: ಸೌಂದರ್ಯ ಸ್ಪರ್ಧೆಯ ವಿವಾದದ ಕುರಿತು ಮೊಬೈಲ್ ಗ್ಯಾರೇಜ್ ಸಂಸ್ಥೆಯ ಮಾಲಕರಿಂದ ಸ್ಪಷ್ಟನೆ

ಸುಳ್ಯ: ಸೌಂದರ್ಯ ಸ್ಪರ್ಧೆಯ ವಿವಾದದ ಕುರಿತು ಮೊಬೈಲ್ ಗ್ಯಾರೇಜ್ ಸಂಸ್ಥೆಯ ಮಾಲಕರಿಂದ ಸ್ಪಷ್ಟನೆ

- Advertisement -
- Advertisement -

ಸುಳ್ಯ: ನಗರದ ಮುಖ್ಯ ರಸ್ತೆ ಬಾಳೆಮಕ್ಕಿ ಯಲ್ಲಿ ಕಳೆದ ಆರು ವರ್ಷಗಳಿಂದ ತಮ್ಮೆಲ್ಲರ ಸಹಕಾರದಿಂದ ಮೊಬೈಲ್ ಗ್ಯಾರೇಜ್ ಎಂಬ ಹೆಸರಿನ ಮೊಬೈಲ್ ಫೋನ್ ಸೇಲ್ಸ್ ಮತ್ತು ಸರ್ವಿಸ್ ಅಂಗಡಿ ನಡೆಸಿಕೊಂಡು ಬರುತ್ತಿದ್ದೇವೆ. ಈವರೆಗೂ ನಮ್ಮ ಸಂಸ್ಥೆಯ ಬಗ್ಗೆ ಉತ್ತಮ ಹೆಸರಿರುವುದು ತಮಗೆಲ್ಲಾ ಗೊತ್ತಿದೆ. ಇದೀಗ ನಮ್ಮ ಸಂಸ್ಥೆಯಲ್ಲಿ ಆನ್ಲೈನ್ ಜಾಹೀರಾತು ( Digital marketing ) ನಡೆಸುವ ಉದ್ದೇಶದಿಂದ ಕಳೆದ ಒಂದು ವರ್ಷಗಳಿಂದ ಮೊಬೈಲ್ ಗ್ಯಾರೇಜ್ ಸುಳ್ಯ ಹೆಸರಿನ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಎಂಬ ಪೇಜ್ ಓಪನ್ ಮಾಡಿರುತ್ತೇವೆ.

ಮೂಲಕ ನೂತನ ಮೊಬೈಲ್ ಫೋನ್ಸ್ ಗಳ ಆಫರ್ ಗಳನ್ನು ಪೋಸ್ಟ್ ಮಾಡಿ ಗ್ರಾಹಕರಿಗೆ ಆನ್ಲೈನ್ ಮೂಲಕ ಮಾಹಿತಿ ನೀಡುವುದು ಉದ್ದೇಶಿಸಿದ್ದೇವೆ. ಅದರಂತೆ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಫಾಲೋವರ್ಸ್ ಹೆಚ್ಚಿಸುವ ಉದ್ದೇಶದಿಂದ ಇನ್ಸ್ಟಾಗ್ರಾಮ್ ಫೋಟೋ ಕಾಂಟೆಸ್ಟ್ ಆಯೋಜಿಸಿದ್ದೇವೆ .ಇದರಲ್ಲಿ ಭಾಗವಹಿಸುವವರು ಫೋಟೋ ಕಳುಹಿಸಲು ಅವಕಾಶ ಜುಲೈ 20ರಂದು ಮಾತ್ರವಾಗಿತ್ತು. ಆ ಪೈಕಿ ಸ್ಪರ್ಧೆಯಲ್ಲಿ 23 ಪುಟಾಣಿ ಮಕ್ಕಳು ಹಾಗೂ 7 ಯುವಕರು ಪಾಲ್ಗೊಂಡಿದ್ದಾರೆ.

ಇದರಲ್ಲಿ ಪುಟಾಣಿ ಮಕ್ಕಳಿಗೆ ಮೊದಲ ಆದ್ಯತೆ ನೀಡಿದ್ದೇವೆ. ಯಾರನ್ನು ಒತ್ತಾಯಪೂರ್ವಕವಾಗಿ ಭಾಗವಹಿಸುವಂತೆ ಹೇಳಿರುವುದಿಲ್ಲ. ಆದರೆ ಇದರ ಕುರಿತು ನಮ್ಮ ಸಂಸ್ಥೆಯ ಬಗ್ಗೆ ಇಲ್ಲಸಲ್ಲದ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿರುತ್ತದೆ. ಇದು ಯಾವುದಕ್ಕೂ ಮೊಬೈಲ್ ಗ್ಯಾರೇಜ್ ಗ್ರಾಹಕರು ಕಿವಿಗೊಡದೆ ಮುಂದೆಯೂ ತಮ್ಮೆಲ್ಲರ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ. ಎಂದು ಸಂಸ್ಥೆಯ ಮಾಲಕ ಹಾಗೂ ಸಿಬ್ಬಂದಿ ವರ್ಗದವರು ಪತ್ರಿಕೆಗೆ ಸ್ಪಷ್ಟನೆಯನ್ನು ನೀಡಿರುತ್ತಾರೆ.

- Advertisement -

Latest News

error: Content is protected !!