Friday, June 5, 2026
Homeತಾಜಾ ಸುದ್ದಿರಾತ್ರೋರಾತ್ರಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತ; ಬದಲಿ ಮಾರ್ಗ ಬಳಸಲು ವಾಹನ ಸವಾರರಿಗೆ ಸೂಚನೆ

ರಾತ್ರೋರಾತ್ರಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತ; ಬದಲಿ ಮಾರ್ಗ ಬಳಸಲು ವಾಹನ ಸವಾರರಿಗೆ ಸೂಚನೆ

- Advertisement -
- Advertisement -

ಹಾಸನ; ರಾತ್ರೋರಾತ್ರಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾಗಿದ್ದು, ಬದಲಿ ಮಾರ್ಗ ಬಳಸಲು ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಕಲೇಶಪುರದ ತಾಲೂಕಿನ ಮಾರೆನಹಳ್ಳಿ ಬಳಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ವಾಹನಗಳನ್ನು ಹಾಸನದಿಂದ ಬೇಲೂರು ಮಾರ್ಗವಾಗಿ ಚಾರ್ಮುಡಿ ಘಾಟ್ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.ಮಂಗಳೂರಿಂದ ಬರುವ ವಾಹನಗಳು ಸಂಪಾಜೆ ಮತ್ತು ಚಾರ್ಮುಡಿ ಘಾಟ್ ಮಾರ್ಗದಲ್ಲಿ ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

ರಾತ್ರಿ ಮರಗಳ ಸಹಿತ  ಭಾರೀ ಗುಡ್ಡ ಕುಸಿತವಾಗಿರೋದರಿಂದ ರಸ್ತೆ ಬ್ಲಾಕ್ ಆಗಿದ್ದು ವಾಹನ ಸವಾರರು ರಸ್ತೆಯಲ್ಲೇ ಜಾಗರಣೆ ಮಾಡುವಂತಾಗಿದ್ದು, ಟ್ರಾಫಿಕ್ ಜಾಮ್ ಕೂಡ ಆಗಿ ಪರದಾಡಿದ್ದಾರೆ.

- Advertisement -

Latest News

error: Content is protected !!