Friday, June 5, 2026
Homeಕರಾವಳಿಮಂಗಳೂರುಮಂಗಳೂರು; ಜಪ್ಪಿನಮೊಗರಿನಲ್ಲಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣ; ಕಾರು ಚಾಲಕ ಮದ್ಯ...

ಮಂಗಳೂರು; ಜಪ್ಪಿನಮೊಗರಿನಲ್ಲಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣ; ಕಾರು ಚಾಲಕ ಮದ್ಯ ಸೇವಿಸಿ ಕಾರು ಚಲಾಯಿಸಿರೋದು ತನಿಖೆಯಿಂದ ಬಯಲು

- Advertisement -
- Advertisement -

ಮಂಗಳೂರು; ಜಪ್ಪಿನಮೊಗರಿನಲ್ಲಿ 18-06-2025 ರಂದು ತಡರಾತ್ರಿ 01.30ರ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಚಾಲಕ  ಅಮನ್ ರಾವ್ (22) ಸಹ ಪ್ರಯಾಣಿಕ ಓಂಶ್ರೀ(24) ರವರು ಮೃತಪಟ್ಟಿದ್ದರು. ಸಹ ಪ್ರಯಾಣಿಕರಾದ ಆಶಿಶ್(23), ವಿದೇಶಿ ಪ್ರಜೆ ಜೆರಿ (23) ಗಾಯಗೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಕಾರು ಚಾಲಕ ಮದ್ಯ ಸೇವಿಸಿ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಅನ್ನೋದು ಗೊತ್ತಾಗಿದೆ.

ಅದರಂತೆ  ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮೊ.ನಂ.152/2025 ಕಲಂ:281, 125(ಎ), 125(ಬಿ), 106(1) BNS ಜೊತೆಗೆ 183, 185 ಐ.ಎಮ್.ವಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!