Thursday, June 4, 2026
Homeಪ್ರಮುಖ-ಸುದ್ದಿಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಟ್ಟಿಯೂರು ದೇವಾಲಯಕ್ಕೆ ನಟ ದರ್ಶನ್ ದಂಪತಿ ಭೇಟಿ

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಟ್ಟಿಯೂರು ದೇವಾಲಯಕ್ಕೆ ನಟ ದರ್ಶನ್ ದಂಪತಿ ಭೇಟಿ

- Advertisement -
- Advertisement -

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಟ್ಟಿಯೂರು ದೇವಾಲಯಕ್ಕೆ ನಟ ದರ್ಶನ್ ದಂಪತಿ ಭೇಟಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಕೇರಳದ ಕಣ್ಣೂರು ಜಿಲ್ಲೆಯ ಮಡಾಯಿ ಕಾವು ದೇವಸ್ಥಾನಕ್ಕೆ ದರ್ಶನ್ ಭೇಟಿ ನೀಡಿದ್ದರು. ಇದೀಗ ವರ್ಷದಲ್ಲಿ ಕೇವಲ 30 ದಿನಗಳ ಕಾಲ ಮಾತ್ರ ತೆರೆದಿರುವ ದೇಗುಲಕ್ಕೆ ದರ್ಶನ್ ಭೇಟಿ ಕೊಟ್ಟಿದ್ದಾರೆ.

ಪತ್ನಿ ವಿಜಯಲಕ್ಷ್ಮೀ , ನಟ  ಧನ್ವೀರ್ ಗೌಡ ಹಾಗೂ ಕುಟುಂಬದವರ ಜೊತೆ  ನಟ ದರ್ಶನ್ ಕೊಟ್ಟಿಯೂರು ದೇವಾಲಯಕ್ಕೆ ನೀಡಿದ್ದಾರೆ. ಇದು ಶಿವ ದೇವಾಲಯವಾಗಿದ್ದು, ದಕ್ಷಿಣ ಕಾಶಿ ಎಂದೇ ಈ ಸ್ಥಳವನ್ನು ಕರೆಯಲಾಗುತ್ತದೆ. ವಿಜಯಲಕ್ಷ್ಮಿ, ಧನ್ವೀರ್ ಅವರುಗಳ ಜೊತೆಗೆ ನಟ ದರ್ಶನ್ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಕೊಟ್ಟಿಯೂರುನಲ್ಲಿ ಅಕ್ಕರೆ ಕೊಟ್ಟಿಯೂರು ಮತ್ತು ಇಕ್ಕರೆ ಕೊಟ್ಟಿಯೂರು ಎಂದು ಎರಡು ದೇವಾಲಯಗಳಿವೆ. ಈಗ ದರ್ಶನ್ ಭೇಟಿ ನೀಡಿರುವುದು ಅಕ್ಕರೆ ಕೊಟ್ಟಿಯೂರಿಗೆ.  ಇಲ್ಲಿ ವೈಶಾಖ ಮಾಸದಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಇದೇ ಕಾರಣಕ್ಕೆ ಜೂನ್ 8 ರಿಂದ ಜುಲೈ 4 ರವರೆಗೆ ಮಾತ್ರ ಈ ದೇವಾಲಯ ತೆರೆದಿರುತ್ತದೆ. ಜೂನ್ 30ರ ಬಳಿಕ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗುತ್ತದೆ.

- Advertisement -

Latest News

error: Content is protected !!